Sunday, July 5, 2009

ಮಳೆಗೆ ಕಾದಿದೆ ಇಳೆ


ಇದು ನಿಸರ್ಗವೇ ಏರ್ಪಡಿಸುವ ಒಂದು ಸುಂದರ ಪ್ರೀತಿಯ ಸೋನೆ ಮಳೆ. ಸಾವಿರಾರು ವರ್ಷಗಳಿಂದ ನಿಸರ್ಗದಲ್ಲಿ ನಡೆಯುತ್ತಿದೆ ವರ್ಷೋತ್ಸವ. ಗಿಡ, ಮರ, ಹುಲ್ಲುಗಳು ಹಸಿರನ್ನು ಮೈ ಮೇಲೆ ಹೊದ್ದು ಹಬ್ಬದ ಸಂಭ್ರಮವನ್ನು ಸವಿಯುವುದಕ್ಕೆ ಕಾತುರದಿಂದ ಕಾಯುತ್ತಿವೆ. ಮಳೆಗೆ ದಿನಗಣನೆ ಆರಂಭವಾಗಿದೆ. ಮರಗಳೆಲ್ಲಾ ಸಾಲಾಗಿ ನಿಂತು ಸೋನೆ ಮಳೆಯ ಸ್ವಾಗತಕ್ಕೆ ಕಾದು ನಿಂತಿವೆ.

ಮಳೆರಾಯನ ಆಗಮನದವರೆಗೂ ನಡೆಯುತ್ತಲೆ ಇರುತ್ತದೆ ವೃಕ್ಷಗಳ ನಿರೀಕ್ಷೆಯ ಸಂಭ್ರಮೋತ್ಸಾಹ!! ಯುಗಾದಿ ಹಬ್ಬಕ್ಕೆ ಸ್ವಲ್ಪ ಮೊದಲು ನಿಸರ್ಗ ತನ್ನ ಹಳೆಯ ಉಡುಪು ಕಳಚಲು ಅರಂಭಿಸುತ್ತದೆ. ಗಿಡ ಮರಗಳ ಎಲೆಗಳು ಉದುರಿ ಹೋಸ ಚಿಗುರು ಪಲ್ಲವಿಸುತ್ತದೆ.

ವರುಣನ ದಿಬ್ಬಣದ ಸ್ವಾಗತಕ್ಕೆ ಭೂರಮೆ ಸಿದ್ಧವಾಗಿದೆ. ಈ ವರ್ಷ ಮುಂಗಾರು ಸ್ವಲ್ಪ ತಡವಾದರೂ ಭಾರಿ ಪ್ರಮಾಣದಲ್ಲಿ ಬರುತ್ತದೆ ಎಂಬ ನಿರೀಕ್ಷೆಯ ಮಹಾಪೂರವನ್ನೇ ಹೊತ್ತು ನಿಂತಿದ್ದಾರೆ ಜನ. ಸುಡುವ ಬಿಸಿಲ ಧಗೆಯಿಂದ ಬೇಸತ್ತಿರುವ ಜನ, ಸೋನೆ ಮಳೆಯ ಲೀಲೆಯನ್ನು ಸವಿಯಲು ಸಿದ್ಧರಾಗಿದ್ದಾರೆ.

ಇಷ್ಟೇಲ್ಲಾ ಸಿದ್ದತೆ ಮಳೆರಾಯನಿಗಾಗಿ ನಡೆದಿರುವಾಗ, ನಮ್ಮ ಹಂಬಲಕ್ಕೆ ಆ ವರುಣ ಖಂಡಿತಾವಾಗಿಯು ಸ್ಪಂದಿಸದೆ ಇರಲಾರ. ನಾವು ಪ್ರಕೃತಿ ಮಾತೆಯ ಮೇಲೆ ದೌರ್ಜನ್ಯ ನಡೆಸಿದ್ಧೇವೆ, ಆ ವರುಣ ಇದಕ್ಕಾಗಿ ಕೋಪಿಸಿ ಕೊಂಡಿರ ಬಹುದೆ? ಇಂಥಾ ಪ್ರಶ್ನೆಯೊಂದು ಎಷ್ಟು ಮಂದಿಗೆ ಮೂಡಿತು? ಆದೇನೆ ಇರಲಿ ಮಳೆ ಇಲ್ಲದ ಇಳೆ ಕಲ್ಪಿಸಿ ಕೊಳ್ಳಲು ಸಾಧ್ಯವಿಲ್ಲ. ಆ ಸೋನೆ ಮಳೆ ಆದಷ್ಟು ಬೇಗ ಸುರಿದು ಎಲ್ಲರ ಮನಗಳನ್ನು ತಂಪಾಗಿರಿಸಲಿ. ಈ ಪ್ರಪಂಚದ, ಜನರ ಮನಸ್ಸಿನಲ್ಲಿನ ರಾಢಿ, ಆ ಮಳೆಯಲ್ಲಿ ಕೊಚ್ಚಿ ಹೋಗಲಿ. ಒಂದೇ ವಿನಂತಿ ಅಂದರೆ ಮಳೆ ತನ್ನ ರೌದ್ರಾವತಾರವನ್ನು ಪ್ರದರ್ಶಿಸದಿರಲಿ. ಬಾ ಮಳೆಯೆ ಬಾ......

2 comments:

  1. ನಮಸ್ಕಾರ ಶ್ರಾವ್ಯ, ಹೇಗಿದೆ ದೂರದಶ೵ನ -ಆಕಾಶವಾಣಿಯ ನಿಮ್ಮ ವೃತ್ತಿ ಜೀವನ..? ಸಮಯಕ್ಕೆ ಸರಿಯಾಗಿ ಹಣ ನೀಡದಿದ್ದರೂ ದುಡಿಸಿಕೊಳ್ಳುವ ಪ್ರಸಾರಭಾರತಿಯಲ್ಲಿ ಸಮಸ್ಯೆಗಳ ಸಾಗರವೇ ಇದೆ ಆದರೂ ಸಮಯ ಕಳೆಯಲು ಸ್ವಲ್ಪ ತಮಾಷೆ ನೊಡಲು ಡಿಡಿ, ಆಕಾಶವಾಣಿ ನಿಜಕ್ಕೂ ಹೇಳಿ ಮಾಡಿಸಿದ ತಾಣ. ನಿಮ್ಮ ಹಂಗಾಮಿ ವೃತ್ತಿ ಜೀವನದ ವಿಷಯಗಳನ್ನೇ ನೀವು ರಂಜನೀಯವಾಘಿ ವಣ೵ಸಿದರೆ ನಿಮ್ಮ ಬರವಣಿಗೆ ಇನ್ನಷ್ಟು ಆಕಷ೵ಕವಾಗಬಹುದು ಪ್ರಯತ್ನಿಸಿ. ಕನಿಷ್ಠ ವಾರಕ್ಕೆರಡು ಬಾರಿಯಾದರೂ ನಿಮ್ಮ 'ಅಡ್ಡ'ವನ್ನು ರಿಫ್ರೆಷ್ ಮಾಡಿ.

    ReplyDelete
  2. namaskara,prakriti varnane tumbaa chennagide

    ReplyDelete