Saturday, June 20, 2009

ಕೊಲಾಜ್ ಬದುಕಿನ ಬಿಡಿ ಬಿಡಿ ಚಿತ್ರ - ಮದುವೆಗಳ ಸುಗ್ಗಿ ಸಂಭ್ರಮ



ನಾನು ಇನ್ನೂ ನನ್ನ laptopನ ಆರ್ಥ ಮಾಡಿಕೊಳೋದ್ರಲ್ಲೆ ಇದ್ದೀನಿ. ಈಗ ಮದುವೆ ಸಿಸನ್ ನೋಡಿ, ಕಳೆದ ಎರಡು ತಿಂಗಳಿನಿಂದ ತುಂಬ ಮದುವೆಗಳಿಗೆ ಹೋಗಿದ್ದು ಅಲ್ಲಿ ಸಂತೋಷದಿಂದ ಇದ್ದದ್ದು ಈಗ ಬರಿ ನೆನಪು ಮಾತ್ರ. ಇಲ್ಲಿ ಗೆಳತಿ ರೇಷ್ಮ ಮದುವೆ ಮಾತ್ರ ತುಂಬ ಬೇಸರ ಉಂಟಾಯಿತು. ಕೆಲವು ತಪ್ಪು ನಿರ್ಧಾರಗಳನ್ನ ಅವಳು ತೆಗೆದು ಕೊಂಡಿದ್ದರಿಂದ ಯಾರೊಬ್ಬರು ಅವಳ ಮದುವೆಗೆ ಹೋಗದಿರೊ ಹಾಗಾಯ್ತು. ಆದು ಬಿಟ್ರೆ ನನ್ನ ಗೆಳೆತಿಯರಾದ ಯಾಮಿನಿ, ಹೇಮ,
ದೀಪಿಕಾ ಹೀಗೆ list ಬೆಳೀತಾ ಹೋಗುತ್ತೆ. ಇದಲ್ಲದೆ ನಮ್ಮ ಸಂಬಂಧದಲ್ಲಿ ಅನಂತು ಮಾಮ,
ಚೈತ್ರ ವಿವಾಹದ ಬಂಧನಕ್ಕೆ ಕಾಲಿಟ್ಟರೂ.

ಇವರಲೆಲ್ಲ ವಿಶೇಷ ಅಂದ್ರೆ ನಮ್ಮ ಅನಂತು ಮಾಮ. ಅವನೊಬ್ಬ ದೊಡ್ಡ ಕಲಾವಿದ, ತುಂಬ ಪ್ರತಿಭೆ ಇರೊ ಹುಡುಗ. ಆದ್ರೆ ಎರಡು ವರ್ಷದ ಹಿಂದೆ ಅವನು ಪಟ್ಟ ಯಾತನೆ ಸ್ವಲ್ಪವೇನಲ್ಲಾ. ದುರಂತ ಅಂದ್ರೆ ಇದೆ ಅಲ್ವ. ವಿಧಿ ಅವನ ಬದುಕಿನಲ್ಲಿ ದೊಡ್ಡ ಅಟ್ಟಹಾಸವನ್ನೆ ಮೆರೆದ. ಚಿಕ್ಕದೊಂದು ಅಪಘಾತದಿಂದ ಶುರುವಾಗಿ ಅವನ ಪ್ರಾಣಕ್ಕೆ ಕುತ್ತು ಬಂತು ಆ ಸಮಯದಲ್ಲಿ ಅವನನ್ನು ಕೈ ಹಿಡಿದು ನಡೆಸಿದ ಶಕ್ತಿ jesus!!! ನಂತರದ ದಿನಗಳಲ್ಲಿ ಚೇತರಿಕೆ ಕಂಡು ಈಗ ಮದುವೆಯಾಗಿದ್ದಾನೆ. Really god is great.ಈ ಆಷಾಡ ಮಾಸ
ಬರದೆ ಇದ್ದಿದ್ರೆ ಬಹುಃಶ ಇನ್ನಷ್ಟು ಮದುವೆಗಳಿಗೆ ಹೋಗ್ತಾ ಇದ್ದೆ ಅನಿಸುತ್ತೆ.

ಅನಂತು - ಸವಿತಾ
ಮತ್ತೆ ನನ್ನಲ್ಲಿ ಅನಾರೋಗ್ಯದ ಸಮಸ್ಯೆ ಕಾಡ ತೊಡಗಿತ್ತು. Thank god ಈ ಬಾರಿ serious ಆಗಲಿಲ್ಲ. ಆದ್ರೆ ಈ ಬಾರಿ ನನ್ನ ಜೋತೆ ಅಮ್ಮನ health ತುಂಬ effect ಆಯಿತು.

ಈ ನಡುವೆ ನಾನು ಆಕಾಶವಾಣಿಯಲ್ಲಿ ಕೆಲಸಕ್ಕೆ ಸೇರಿದೆ. ನನಗೆ ನಮ್ಮ 'Radio siddhartha' ದಲ್ಲಿ ಇದ್ದ experience ನಿಂದ ಇಲ್ಲಿ ಕೆಲಸ ಸುಲಭ ಆಗಿ ಹೋಯಿತು. ಆದ್ರೆ money wise ನನಗೆ AIR work out ಆಗ್ತಾಯಿಲ್ಲ. ನಾನು ತುಂಬ practical ಆಗಿ ಯೋಚನೆ ಮಾಡ್ತಿನಿ. But AIR environment, DD ಕ್ಕಿಂತ ಸಾವಿರ ಪಾಲು ಮೇಲು. DDನಲ್ಲಿ as usual use and throw policy. ಅವರಿಗೆ ಬೇಕಾದಾಗ ನನಗೆ ಜ್ವರ ಇದೆ ಅಂದ್ರು ಬಿಡಲಿಲ್ಲ. ಈಗ ನನ್ನ ಅವಶಕತೆ ಇಲ್ಲ. ನನಗೆ ಬೇರೆ option ಇಲ್ಲ.

ಈ ಮಧ್ಯೆ ನಿಶಾ ಒಂದು ಮದುವೆ function ಒಪ್ಪಿಕೊಂಡಿದ್ದಳು. ಒಬ್ಬರು singer ಕೈ ಕೊಟ್ರು ಅಂತ ನನ್ನನ್ನು ಬರೊದ್ದಕ್ಕೆ ಹೇಳಿದ್ಳು. ನಾನು ಮನೆಯಲ್ಲಿ ತಿಳಿಸದೆ ಹೋದೆ. ಅಪ್ಪನಿಗೆ ನಾನು ಹಾಡೊದು ಒಂದು ಚೂರು ಇಷ್ಟವಿಲ್ಲ. ಆದ್ರೆ ನನಗೆ ಒಂಥರಾ ಹುಚ್ಚು. ನಾನು audio console ನೋಡಿ ಕೊಳ್ಳುವುದಾಗಿ ಒಪ್ಪಿಕೊಂಡೆ. ಆದ್ರೆ ಅಲ್ಲಿ ಆದ ಕೊನೆ ಕ್ಷಣದ ಬದಲಾವಣೆಯಲ್ಲಿ ನಿಶಾ ನನ್ನ ಕೈಲಿ ’ಮಧುವನ ಕರೆದರೆ’, ’ಮೊಗ್ಗಿನ ಮನಸ್ಸಲಿ’, ’ಸುಮ್ಮನೆ ಸುಮ್ಮನೆ’- ಈ ಮೂರು ಹಾಡುಗಳನ್ನ ಹಾಡಿಸಿ ಅವಳ responsibility ಮುಗಿಸಿದಳು. ಕೆಟ್ಟ ಹಟದ ಸ್ವಭಾವ ಅವಳದು. ಮೊಗ್ಗಿನ ಮನಸ್ಸಲಿ ಹಾಡು ಹಾಡುವಾಗ ಸಂಗತಿಗಳು ತಪ್ಪಾಗಿ, ಯಾರಗೂ ಗಮನಕ್ಕೆ ಬಾರದ ಹಾಗೆ cover up ಮಾಡಿ ಬಿಟ್ಟೆ. professional ಆಗಿ ಸಂಗೀತ ಕಲಿತಿಲ್ಲ. ಅದಕ್ಕೆ ತುಂಬ nervous ಆಯಿತು.

ಈ ಎಲ್ಲಾದರ ನಡುವೆ ನನ್ನ PG diploma ಪರೀಕ್ಷೆ. ಯಾಕೊ ಗೊತ್ತಿಲ್ಲ ನನ್ನ ಓದುವ ಆಸೆ ಮುಂದುವರೆದಿದೆ. ಈ ಡಿಗ್ರಿ ಮುಗುದ ಮೇಲೆ ಮುಂದೆ psychologyನಲ್ಲಿ studies continue ಮಾಡುವ ಯೋಚನೆ ಇದೆ. ಈ ಪರೀಕ್ಷೆ ತಕ್ಕ ಮಟ್ಟಿಗೆ prepare ಆಗಿದ್ದೇನೆ. ನನಗೆ correspondence course ಅನುಭವ ಹೊಸದು. ನನ್ನ Indian cinema ಬಗ್ಗೆ thesis ಬರೆದದ್ದು ಒಂದು super experience. ಈ courseನಲ್ಲಿ ಇದೊಂದೆ ನನಗೆ ಖುಷಿ ಕೊಟ್ಟಿದ್ದು. ನನ್ನ ಜೋತೆ ಇದ್ದವರು ಯಾರು ನನ್ನ ಸಮಾನ ವಯಸ್ಕರಿಲ್ಲದೆ ಇದ್ದುದರಿಂದ ನನಗೆ ಯಾರು friends ಸಿಗಲಿಲ್ಲ. ಎಲ್ಲಾ uncle auntyಗಳ ಜೋತೆ ನಾನು ಜಾಸ್ತಿ mingle ಆಗ್ತಾ ಇರಲಿಲ್ಲ ಅದರಿಂದ ತುಂಬ boring ಆಗಿತ್ತು ಈ ಒಂದು ವರ್ಷ.

ಈ ಎಲ್ಲಾ ಜೀವನದ ಜಂಜಾಟದ ನಡುವೆ ಹೋಸ ಭರವಸೆಗಳು, ಈಡೇರದ ಆಸೆಗಳು ಹುಟ್ಟಿ ಹಾಗೇಯೆ ಕಮರಿ ಹೋಗುತ್ತಿವೆ. ಮುಂದಾದರೂ ಓಳ್ಳೆ ದಿನಗಳು ಬಂದಿತೆಂಬ ನಿರೀಕ್ಷೆಯಲಿ.......

2 comments:

  1. ಮದುವೆ, ಕೆಲಸ, ಓದು...ಒಂದಕ್ಕೊಂದು ಸಂಬಂಧವಿರದಿದ್ದರೂ ಏನೋ ಅನುಬಂಧವಿದೆ. ಇದಕ್ಕೇ ಇರಬೇಕು ಕೊಲಾಜ್ ಅನ್ನುವುದು. ಸೊಗಸಾದ ಬರವಣಿಗೆ.

    ReplyDelete
  2. ನಮಸ್ತೆ ನಿಮ್ಮದೇ ಮಾತಿನಲ್ಲಿ ನಿಮ್ಮ ಬಗ್ಗೆ ಚನ್ನಾಗಿ ಹೇಳಿಕೊಂಡಿದ್ದೀರಿ. ಸೊಗಸಾದ ಹಾಡುಗಾತಿ ಎಂದ ಮೇಲೆ ಸಮಸ್ಯೆ ಏನು? ಯಾವದಾದ್ರು ಆಲ್ಬಂ ರಿಲೀಸ್ ಮಾಡೋದಲ್ವಾ..? ಇಂತಹುದಕ್ಕೆ ತಂದೆನ ೊಪ್ಪಿಸೋದು ದೊಡ್ಡ ವಿಷಯ ಅಲ್ಲ ಅಲ್ವಾ? ಶ್ರಾವ್ಯಾ....?

    ReplyDelete