Monday, April 20, 2009

ಕೊಲಾಜ್- ಬದುಕಿನ ಬಿಡಿ ಬಿಡಿ ಚಿತ್ರಮಾರ್ಚು ಫುಲ್ ಬಿಜಿ ವರ್ಕೂ!!

ಮಾರ್ಚ ತಿಂಗಳು ಬಂತೆಂದರೆ, year end. ಸಾಮಾನ್ಯವಾಗಿ ಎಲ್ಲಾ officeಗಳಲ್ಲಿ ತುಂಬಾನೇ ಕೆಲಸ. For a change ಮಾರ್ಚ ತಿಂಗಳು ಪೂರ್ತಿ ನಾನು ಕೂಡ ತುಂಬ ಬಿಜಿಯಾಗಿದ್ದೆ. ದೂರದರ್ಶನದಲ್ಲಿ ಕೈತುಂಬ ಕೆಲಸ ಸಿಕ್ತು. ಈ ಹಿಂದೆ ಎಷ್ಟೊ ತಿಂಗಳು ಕೇವಲ ಎರಡು ಮೂರು ದಿನ ಕೆಲಸ ಮಾಡಿ ೮೦೦ ರೂ ತೆಗೆದು ಕೊಂಡಿದ್ದು ಇದೆ. ನನ್ನ ತಿಂಗಳ ಖರ್ಚು ಎರಡು ಸಾವಿರ ರೂಪಾಯಿ ಮೀರ್‍ತಾ ಇತ್ತು. But experienceಗಾಗಿ ನಾನು ದೂರದರ್ಶನದಲ್ಲಿ ಕೆಲಸ ಮುಂದುವರಿಸಿದೆ. ನನಗೆ ಜಾಸ್ತಿ ದಿನ dates ಸಿಕ್ತಾ ಇರಲಿಲ್ಲ. ಜೋತೆಗೆ ನಮಗೆ payment ಆಗೊವರೆಗೆ ಆದನ್ನು ನಂಬಿ ಕೂತರೆ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಗ್ಯಾರಂಟಿ. ನನಗೆ ಮನೆಯವರ support ತುಂಬ ಇತ್ತು ಈಗಲೂ ಅಮ್ಮ, ಅಪ್ಪ ನನಗೆ ಆರಾಮವಾಗಿ ಮನೆಯಲ್ಲಿ ಇರಲು ಹೇಳ್ತಾರೆ ಆದರೆ ಮುಂದೆ ಏನಾದರೂ life U turn ತೆಗೆದು ಕೊಂಡರೆ ನನ್ನ ಸಹಾಯಕ್ಕೆ ಬರೋದು ನನ್ನ ಕೆಲಸ ಮಾತ್ರ ಆನ್ನೋ ನಂಬಿಕೆ ನನ್ನದು. ಆದರಿಂದ ಕಡಿಮೆ ಸಂಬಳವಾದ್ರು ನಾನು ಇನ್ನೂ ದೂರದರ್ಶನದಲ್ಲಿ ಉಳಿದು ಕೊಂಡಿದ್ದೇನೆ.

ದೂರದರ್ಶನದಲ್ಲಿ ನಾನು ನನ್ನ datesಗಿಂತ substitute dates ಜಾಸ್ತಿ ಮಾಡ್ತೀನಿ. ಮಾರ್ಚ ತಿಂಗಳಿನಲ್ಲಿ almost full month ಕೆಲಸ ಸಿಕ್ತು. ಈ casual duty ಮಾಡೋ ಒಂದು advantage ಅಂದ್ರೆ dutyಗೆ ಅಂತ ಹೋದ್ರೆ ಪ್ರತಿ ದಿನ ಬೇರೆ ಬೇರೆ ವ್ಯಕ್ತಿಗಳು. ಇದರಿಂದ ತುಂಬ ಅನುಭವಗಳು ಆದ್ವು. ಒಬ್ಬರದೂ ಒಂದೂಂದು ರೀತಿಯ ಸ್ವಭಾವ, ಎಲ್ಲರ ಜೋತೆ adjust ಮಾಡಿಕೊಂಡು ಕೆಲಸ ಮಾಡ ಬೇಕು. ಕೆಲವರು ಓಳ್ಳೆಯವರಾದರೆ ಕೆಲವರು ತುಂಬ ಕಿರಿಕ್ ಮಾಡೊರು, ಕಾರಣವಿಲ್ಲದೆ ಬೈಗುಳ ಫ್ರೀಯಾಗಿ ಸಿಕ್ತಾ ಇತ್ತು. ದುರಂತ ಅಂದ್ರೆ ಇದೆ ಅಲ್ವಾ? ನನ್ನದಲ್ಲದ ತಪ್ಪಿಗೆ ನಾನು ಬೈಸ್ಕೊತಾ ಇದ್ದೆ. DDನಲ್ಲಿ ಕೆಲಸ ಮಾಡೊ ಕೆಲವರು media fieldಗೆ ನಾಲಾಯಕ್ಕೂ. ಈ ಥರ ಜನಗಳು ಪ್ರಪಂಚದೆಲ್ಲೆಡೆ ಇದ್ದಾರೆ ಬಿಡಿ. ಈ ಮಧ್ಯೆ ತುಂಬ ಮಂದಿ ನನಗೆ encourage ಮಾಡಿದ್ದಾರೆ.

DDನಲ್ಲಿ ನನ್ನದೆ ಆದ ಒಂದು image create ಆಗಿ ಹೋಗಿತ್ತು. ನಾವು ಏನೆಂದು ಕೊಂಡಿದ್ದೆವೊ ಹಾಗೇ ನೀವು ಖಂಡಿತಾ ಇಲ್ಲ ಅಂತ ನನಗೆ ಜನ ಹೇಳಿದಾಗ ನಕ್ಕು ಸುಮ್ಮನಾಗಿದ್ದೇನೆ. ಕೆಲವು ಬಾರಿ ನನ್ನ appearance ನಿಂದ ನನ್ನ ಬಗ್ಗೆ ಕೆಲವರು image create ಮಾಡಿಕೊಳ್ಳಲು ಕಾರಣವಿರ ಬಹುದೇನೊ. ಈ image ವಿಚಾರ ಇಲ್ಲಿ ಪ್ರಸ್ತಾಪ ಮಾಡೊದ್ದಿಕೂ ಒಂದು ಕಾರಣ ಇದೆ. ನಿತ್ಯ ನನ್ನ ಮನೇಲಿ ನನ್ನ ಕೆಲಸದವಳಿಗೂ ನನಗೂ ಒಂದು ರೀತಿ cold war ನಡೀತಾ ಇತ್ತು. ಅವಳು ಮಾಡೊ ಕೆಲಸ ನನಗೆ ಹಿಡಿಸುತ್ತೀರಲಿಲ್ಲ. ಅವಳಿಗೆ queen ಅಂತ ಕರೀತಾ ಇದ್ದೆ. ಏನೇ ಆಗಲಿ ಅವಳು ನನಗಿಂತ ವಯಸ್ಸಿನಲ್ಲಿ ದೊಡ್ಡವಳು, ಆಕೆಗೆ ತುಂಬ ನೀಯತ್ತು ಪಾಪ.

ಒಂದು ದಿನ ನಮ್ಮ queenಗೆ ವಿಪಿ ರೀತ ಆರೋಗ್ಯ ಹದಗೆಟ್ಟಿತ್ತು ಆದರೂ ಆಕೆ ಕೆಲಸಕ್ಕೆ ತಪ್ಪಿಸಿಕೊಳ್ಳಲಿಲ್ಲ. ಆಕೆಯ ಪರಿಸ್ಥಿತಿ ನೋಡಿ ನನಗೆ ತುಂಬ ಬೇಜಾರಾಯಿತು. ಆಕೆಯನ್ನು ಸುಮ್ಮನೆ ಕೂರಲು ಹೇಳಿ ನಾನೇ ಕೆಲಸ ಎಲ್ಲಾ ಮಾಡಿ ಮುಗಿಸಿದೆ. Queen ತುಂಬ ಸುಸ್ತಾದಂತೆ ಕಂಡು ಬಂದಳು ಅವಳಿಗೆ ಒಂದು ಲೋಟ ಮಜ್ಜೀಗೆ ಕೊಟ್ಟೆ. ಅವಳ ಮುಖದಲ್ಲಿ ಏನೋ ಒಂದು ತರಹದ ಮುಜುಗರ, ಧನ್ಯಾತಾ ಭಾವ ಎದ್ದು ಕಾಣುತಿತ್ತು. ಅಮ್ಮ ನನ್ನ behaviour ನೋಡಿ ಖುಷಿ ಪಟ್ರು. ಇದಾದ ಮೂರು ದಿನ queen absent. ಆ ಸಮಯದಲ್ಲಿ ಮೈಬಗ್ಗಿಸಿ ಕೆಲಸ ಮಾಡಿದ ತೃಪ್ತಿ ನನಗಿದೆ. Queen ಬಂದವಳೆ ನಾನು ತುಂಬ ಉಪಕಾರ ಮಾಡಿದೆ ಆದು ಇದು ಅಂತ ಶುರುಮಾಡಿದ್ದಲು. ಆದರೆ ನಮ್ಮ ಮನೇಲಿ ಕೆಲಸ ಮಾಡೊದು ನನ್ನ ಪುಣ್ಯ ಅಂತ ಹೇಳೊದು ಮಾತ್ರ ಮರೆಯಲಿಲ್ಲ.

ನನ್ನ ಪ್ರಕಾರ ಯಾರಿಗೆ ಆಗಲಿ dignity of labour ಇರಬಾರದು. ಒಮೊಮ್ಮೆ ಕೆಲಸಗಾರರಿಗಿರುವ ನೆಮ್ಮದಿ ನಮ್ಮಲ್ಲಿ ಇಲ್ಲದೆ ಹೋಗುತ್ತೆ. ಸದಾ ದುಡಿಸಿ ಕೊಳ್ಳುವ ಶ್ರೀಮಂತರು ಎಂದಾದರೂ ಅವರ ಆಳುಗಳ ಬಗ್ಗೆ ಯೋಚನೆ ಮಾಡ್ತಾರಾ? ಕಡೆ ಪಕ್ಷ ಶ್ರೀಮಂತರ ಮನೆಯ ನಾಯಿಗೆ ಸಿಗುವ royal treatment ಮನುಷ್ಯರಾದ ಕೆಲಸದವರಿಗೆ ಸಿಗುವುದಿಲ್ಲ. ನಿತ್ಯ ಬರುವ ಕೆಲಸದವರು ಒಂದು ದಿನ ಅವರ private matterಗಾಗಿ ರಜೆ ತೆಗೆದುಕೊಂಡರೆ ಆದನ್ನು ತಿಳಿಯುವ ತನಕ ಬಿಡದ ಹಠಮಾರಿ ಜನ ನಮ್ಮ ನಡುವೆ ಇದ್ದಾರೆ. ಒಮ್ಮೆ ಯೋಚಿಸಿ ನೋಡಿ ನಮ್ಮ ತಾಯಿ holidayನೇ ಇಲ್ಲದೆ officeನಲ್ಲಿ ಕೆಲಸ ಮಾಡ್ತಾ ಇದ್ರೆ ನಾವು ಆಸಮಾಧಾನ ವ್ಯಕ್ತ ಪಡಿಸೊದ್ದಿಲ್ಲವಾ. ತಿಂಗಳಿನಲ್ಲಿ ಒಂದು ದಿನ ಕೆಲಸದವರಿಗೆ ನೀವೇ ರಜೆ ಕೊಟ್ಟು ನೀವೇ ಕೆಲಸ ಎಲ್ಲಾ ಮಾಡಿ ನೋಡಿ ಆಗ ಅವರು ಅನುಭವಿಸುವ pain ನಮಗೆ ಗೊತ್ತಾಗುತ್ತದೆ. ಅಂಥ ದುಡಿಯೊ ಮಂದಿ ಇಂದ ಅಲ್ವಾ ನಮ್ಮ ಜೀವನ ಆರಾಮಾಗಿ ನಡೆಯೋದು. ಅವರಿಗೊಂದು ದಿನ ನೀವೇ ರಜೆ ಕೊಟ್ಟು ನೋಡಿ ನಿಮ್ಮ image ಖಂಡಿತಾವಾಗಿ ಬದಲಾಗಿ ಬಿಡುತ್ತೆ!!!!!!

1 comment:

  1. ohhh ಕೊನೆಗೂ ನಿಮ್ಮ blog ಅಪ್ ಡೇಟ್ ಮಾಡಿದ್ದೀರಿ..? ಏನ್ರೀ ನಿಮ್ಮ ನ್ನ ddನಲ್ಲಿ ಇಂಪ್ರೆಸ್ ಮಾಡೋಕೆ ಟ್ರೈ ಮಾಡಿದ್ದು ಯಾರು..? ಹೋಗ್ಲಿ ಬಿಡಿ ಯಾಕ್ ಬೇಕು dd ಉಸಾಬರಿ ಅಲ್ವಾ...?

    ReplyDelete