Thursday, September 11, 2008

ಕಾಡಿದ SMS


ಮುಗಿಯದ ಕವಿತೆ ನೀನು
ಬರೆಯದ ಹಾಡು ನೀನು
ಅಕ್ಷರ ಬರೆಯದೆ ಈ ಪತ್ರವು ಮುಗಿದಾಗ
ನೆನಪಿನ ರಾತ್ರಿಯಲಿ ತಬ್ಬಲಿ ಅನುರಾಗ
ಎದೆಯ ಗೂಡಿನಲ್ಲಿ ಬೆಳಗುವ ಹಣತೆಯ ಸುತ್ತ ಕಪ್ಪು ಕವಿದಿದೆ ಕುರುಡು ಮನಸ್ಸು ಮಲಗಿದೆ
ರಾತ್ರಿ ಸುಮಾರು ೧೧:೩೦ರ ಸಮಯ ಈ ರೀತಿ ಒಂದು ಸಂದೇಶ ನನ್ನ ಮೋಬೈಲ್ ಗೆ ನನ್ನ ಗೆಳೆಯ ಪಾಟೀಲ್ ನಿಂದ ಬಂತು.ಹೀಗೆ ದಿನ ಒಂದರಲ್ಲಿ ಸುಮಾರು ೧೦೦ ಹೆಚ್ಚು ಸಂದೇಶಗಳು ನನ್ನ ಇನ್ ಬಾಕ್ಸ್ ನಲ್ಲಿ ಬಂದು ಬೀಳುತ್ತವೆ. ನಿಧಾನವಾಗಿ ಆದರೂ ನಾನು ಚಾಚು ತಪ್ಪದೆ ಎಲ್ಲಾ ಸಂದೇಶಗಳನ್ನು ಓದುತ್ತೇನೆ. ಆದರಲ್ಲಿ ಕೆಲವು ಆರ್ಥಹೀನವಾಗಿರುತ್ತವೆ, ಕೆಲವು ಜೋಕ್ಸ್ ಇತ್ಯಾದಿ. ಹಿಂದಿಯನ್ನು ಇಂಗ್ಲೀಷನಲ್ಲಿ ಟೈಪ್ ಮಾಡಿ ಕಳುಹಿಸುತ್ತರಲ್ಲ, ಅಂತಹ ಸಂದೇಶಗಳನ್ನು ನಾನು ಓದುವುದಿಲ್ಲ, ಏಕೆಂದರೆ ನನಗೆ ಹಿಂದಿ ಸ್ಪಷ್ಟವಾಗಿ ಬರುವುದಿಲ್ಲ. ಅಸಲಿಗೆ ಯಾರು ಈ ಸಂದೇಶಗಳನ್ನು ಬರೆಯುತ್ತಾರೆ ಎಂಬುದು ನಿಜಕ್ಕೂ ನನ್ನನ್ನು ಬಿಡದೆ ಕಾಡುವ ಪ್ರಶ್ನೆ. ಇದರ ಸುಷ್ಠೀಕರ್ತ ಯಾರೇ ಆಗಲಿ ಒಟ್ಟಿನಲ್ಲಿ ಒಂದು ಓಳ್ಳೆ ಸಂದೇಶ ಬಂದರೆ ಆದನ್ನು ಓದಿ ಅನುಭವಿಸುವ ಹೃದಯವಂತಿಕೆ ಇದ್ದರೆ ಸಾಕು. ಯಾರೊ ಕಳುಹಿಸಿದ ಎಸ್.ಎಮ್.ಎಸ್ ಅನ್ನು ನಾವು ಪುನಃ ನಮ್ಮ ಸ್ನೇಹಿತರಿಗೆ ಕಳುಹಿಸುವ ಬದಲು, ನಾವೇ ನಮ್ಮ ಹೃದಯಾಳದ ಮಾತನ್ನು ನಮ್ಮ ಶೈಲಿಯಲ್ಲಿ ಬರೆದು ಕಳುಹಿಸಿದರೆ ಒಂದು ರೀತಿಯ ವಿಭಿನ್ನವಾದ ಸಂದೇಶಗಳನ್ನು ನಮ್ಮ ಸ್ನೇಹಿತರಿಗೆ ಕಳುಹಿಸಬಹುದು ಇದರಿಂದ ನಮ್ಮ ಕ್ರಿಯಾಶೀಲತೆ ಹೆಚ್ಚುವುದರಲ್ಲಿ ಸಂಶಯವಿಲ್ಲ."Once you care for a person, you will always do the same! For whats in your mind may escape but whats in your heart will remain forever!" ಈ ಮಾತು ಎಷ್ಟು ಸತ್ಯ ಅಲ್ವ.

No comments:

Post a Comment