Monday, October 6, 2008

ಖುಷಿ ಕೊಟ್ಟ ತುಮಕೂರು ಭೇಟಿ


ಮೊಟ್ಟ ಮೊದಲ ಬಾರಿಗೆ ನಾನು ತುಮಕೂರಿಗೆ ದಿನಾಂಕ ೨೭/೦೯/೨೦೦೮ರಂದು ಕಾಲಿಟ್ಟಾಗ ನನಗೆ ಆತ್ಯಾಂತ ಸಂತೋಷ ಉಂಟಾಯಿತು. ನಾನು ಎರಡುವರೆ ವರ್ಷ ಈ ಊರಿನಲ್ಲಿ ವಾಸವಿದ್ದೆ. ಪ್ರತಿ ಬಾರಿ ನಾನು ಮನೆಗೆ ಬಂದು ನಂತರ ವಾಪಸ್ಸು ಹಿಂದಿರುಗುವಾಗ ನನಗೆ ತುಂಬ ಇರ್ರಿತಶನ್ ಉಂಟಾಗುತ್ತಿತು. ಇ ಅಲ್ವಯ್ಸ್ ಹತೆದ್ ದಿಸ್ ಪ್ಲೇಸ್.ನಾನು ಅಂಥ ಪರಿ ತುಮಕೂರನ್ನು ಹೇಟ್ ಮಾಡೊದ್ದಕ್ಕೆ ಕಾರಣಗಳು ಹಲವು. ಆ ಮಾತು ಬಿಡಿ. ಕಹಿ ಘಟನೆಗಳನ್ನ ಆದಷ್ಟು ಬೇಗ ಮರೆತು ಬಿಡಬೇಕು.

ಅಂದು ನನ್ನ Msc 4th sem results ಬಂದಿತ್ತು. ನಾನು ಚೆನ್ನಾಗಿ marks ತೆಗೆದು ಕೊಂಡಿದ್ದೆ. ಆ ಖುಷಿ ಒಂದೆಡೆಯಾದರೆ ನನ್ನ ಹಳೆ ಸ್ನೇಹಿತರನೆಲ್ಲಾ ನೋಡುತ್ತೇನೆ ಅನ್ನೋ ಒಂದು emotional feeling ಒಂದು ಕಡೆ.
ಬಸ್ಸಿನಲ್ಲಿ ಕುಳಿತು ತುಮಕೂರು ಸಮಿಪಿಸಿದ ಆ ಕ್ಷಣ ಒಂದು ನಯನ ಮನೋಹರ ದೃಶ್ಯ ನನನ್ನು welcome ಮಾಡಿತು. ಕ್ಯಾತಸಂದ್ರದ ಬಳಿ ಇರೋ ಸಿದ್ಧಗಂಗ ಬೆಟ್ಟದ ಧೈತ್ಯ ಬಂಡೆಗಳು ಮೋಡಗಳನ್ನು ಚುಂಬಿಸುತಾ ಇದ್ದವು. ಆಗ ಸಮಯ ಬೆಳಗ್ಗೆ ೧೦ಗಂಟೆ! ಮುಂಜಾನೆಯ ಮಂಜಿನಂತೆ ಕಂಗೊಳಿಸಿತು ತುಮಕೂರು. ಆವತ್ತು early morning freshness ಇತ್ತು.
ಆ ನಿಸರ್ಗದ ಸವಿಯನ್ನು ಅನುಭವಿಸುತ್ತಾ ಹಾಗೆ ಮೈಮರೆತು ಬಸ್ಸಿನ ಕಿಟಕಿಯಾಚೆಗೆ ತಲೆಯಿಟ್ಟೆ. ಪಕ್ಕದಲ್ಲಿ ಕುಳಿತಿದ್ದ ಅಪರಿಚಿತನೊಬ್ಬ "madam careful" ಎಂದು ಕೈಹಿಡಿದು ಎಚ್ಚರಿಸಿದ. ಆ ವೈಭವವನ್ನು ಸೆರೆಹಿಡಿಯಲು ನನ್ನ ಬಳಿ camera ಇರಲಿಲ್ಲ.

ಬಸ್ಸಿನಿಂದ ನನ್ನ stopನಲ್ಲಿ ಇಳಿದೆ ತುಂಬ ಹೊಟ್ಟೆ ಹಸಿವಾಗಿತ್ತು ಆದೇ ನಂಡುಡೇಶ್ವರ ಹೋಟೆಲ್ ತಿಂಡಿ, ಆಟೋ ಚಾಲಕರ ಹತ್ತಿರ ಚೌಕಾಸಿ ಇದೆಲ್ಲಾ ಹಳೆ ನೆನಪುಗಳನ್ನು ಮರುಕಳಿಸಿದವು. ನಮ್ಮ ಕಾಲೇಜಿನ ಗೇಟಿನ ಬಳಿ ಇಳಿದಾಗ, ನಮ್ಮ ಕಾಲೇಜಿನ publicityಗಾಗಿ ದೊಡ್ಡದಾಗಿ ಹಾಕ್ಕಿದ್ದ ನನ್ನ photo ಇರುವ ದೊಡ್ಡ banner ಇನ್ನೂ ಹಾಗೆ ಇತ್ತು. ನನನ್ನು ಕರೆತಂದ ಆಟೋದವ ಆದನ್ನು ಕಂಡು ’madam ನೀವು modelಆ’ ಎಂದು ಕೇಳಿದಾಗ ನಗು ಬಂತು. ’ಇಲ್ಲಪ್ಪ ನಾನು ಈ ಕಾಲೇಜಿನ former student’ ಎಂದಾಗ ಆತ ’ಮತ್ತೆ ಕಾಲೇಜಿಗೆ style ಆಗಿ cooling glass ಹಾಕ್ಕೊಂಡು ಬಂದ್ದಿದೀರ’ ಎಂದು ನಗಾಡಿದ.

ಅಂದು ಕಾಲೇಜಿನಲ್ಲಿ ನನಗೆ ಪರಿಚಯವಿದ್ದ ಸ್ನೇಹಿತರೆಲ್ಲ ಸಿಕ್ಕಿರು, ನಮ್ಮ director sir ತುಂಬ ಚೆನ್ನಾಗಿ ಮಾತನಾಡಿಸಿದ್ರು, ಒಂದು ಪುಟ್ಟ ಸನ್ಮಾನ, ಉಪಚಾರ, ಪ್ರೀತಿ, ಅಭಿನಂದನೆ ಎಲ್ಲವು ಆ ದಿನ ನನ್ನ ಪಾಲಿಗೆ ಇತ್ತು. ಆದರೆ ಇವೆಲ್ಲದರ ನಡುವೆ ನಾನು ತುಂಬ alone ಅಂತ ಅನಿಸೋಕೆ ಶುರುವಾಯಿತು. ಯಾಕೋ ಗೊತ್ತಿಲ್ಲ ಈ ರೀತಿ feelings ನನ್ನನ್ನು ಆವತ್ತು ತುಂಬ ಕಾಡಿತ್ತು.
ನಾನು ಪ್ರತಿಯೊಂದು important situationsನಲ್ಲಿ i will be alone.ಆಗ ನಮ್ಮ ತಂದೆ ತಾಯಿ ನೆನಪಾಗ್ತಾರೆ. ಎಲ್ಲಾರು clap ಮಾಡಿದಾಗ ನನ್ನ parents ಅಲ್ಲಿ ಇದ್ದು clap ಮಾಡಿದ್ರೆ ನನಗೆ ಇನ್ನೊ ಹೆಚ್ಚು ಸಂತೋಷ ಆಗ್ತೀತ್ತೇನೊ. ಬಹುಃಶ ನನ್ನ ಅಮ್ಮನ ಆರೋಗ್ಯ ಚೆನ್ನಾಗಿದಿದ್ರೆ ನನ್ನ ಜೋತೆ ಬರುತ್ತಿದ್ದಳೇನೊ. ಸದಾ busy ಇರೋ ಅಣ್ಣ, ಅಕ್ಕ. ಇಂತಹದೊಂದು ಮಾಯಾ ಸಂಸಾರ ನಮ್ಮ ಮನೆಯಲ್ಲಿ ಇದೆ.

Dialy ಒಬ್ಬ ತಾಯಿ-ಮಗಳು ನನ್ನ ಮನೆ ಮುಂದೆ ಬೆಳಗ್ಗೆ-ರಾತ್ರಿ walkingಗೆ ಹೋಗ್ತಾರೆ. ನನ್ನ ಅಮ್ಮ ಆರೋಗ್ಯವಾಗಿದ್ದೀದ್ರೆ ಹೀಗೆ ನನ್ನ ಜೋತೆಗೂ ಬರ್‍ತಿದ್ರು ಅಂತ imagine ಮಾಡಿಕೊಂಡ್ರೆ ನನ್ನ ಕಣ್ಣು ತುಂಬಿ ಬರುತ್ತೆ. ಕಷ್ಟ ಪಟ್ಟು ಓದಿ ರ್‍ಯಾಂಕ್ ಬಂದಿದ್ರು ಆ ಸಂತೋಷನ ಯಾರೊಬ್ಬರ ಜೋತೆನೂ ಹಂಚಿ ಕೊಳ್ಳಲು ಆಗ್ತಾ ಇಲ್ಲ.ಒಟ್ಟಿನಲ್ಲಿ ಅಪ್ಪ pension ದುಡ್ಡಿನಲ್ಲಿ ನನಗೆ Msc ಮಾಡಿಸಿದ್ರು, ಅಮ್ಮನ ಹಾರೈಕೆ, ಸ್ನೇಹಿತರ ಪ್ರೀತಿ ಇವೆರೆಲ್ಲರಿಗೂ ನಾನು justice ಮಾಡ್ತಿದ್ದೀನ ಅಂತ ಪ್ರಶ್ನಯೊಂದು ನನ್ನ ಮನಸ್ಸಿನಲ್ಲಿ ಉದ್ಭವವಾಗುತ್ತದೆ. ಇದರ ಮಧ್ಯೆ ಸದಾ ಒಬ್ಬೊಂಟಿತನ ನನ್ನನ್ನ ಕಾಡ್ತಯಿರುತ್ತೆ. Whatever it is i try to be happy. ಇನ್ನೂ ಹೆಚ್ಚು ಸಾಧನೆ ಮಾಡ ಬೇಕು ಅನ್ನೋ ಕಿಚ್ಚು ಜೋರಾಗಿ ನನ್ನೊಳಗೆ ಉರಿತಾ ಇದೆ.

No comments:

Post a Comment