Wednesday, June 25, 2008

ಕೊಲಾಜ್-ಬದುಕಿನ ಬಿಡಿ ಬಿಡಿ ಚಿತ್ರ

ಊರ ಕಣ್ಣು, ಯಾರ ಕಣ್ಣು, ಮಾರಿ ಕಣ್ಣು, ಹೋರಿ ಕಣ್ಣು
ಯಾವ ಮಸಣಿ ಕಣ್ಣು ಬಿತ್ತಮ್ಮ, ಬಿತ್ತಮ್ಮ,
ನಮ್ಮ ಪ್ರೀತಿ ಮ್ಯಾಲೆ, ನಮ್ಮ ಪ್ರೀತಿ ಮ್ಯಾಲೆ......

ಬದುಕು ಒಂದು ರೈಲಣ್ಣ,
ವಿಧಿ ಅದರ ಯಜಮಾನ,
ಅವನು ಹೋಗು ಅಂದ ಕಡೆಗೆ ಹೋಗ ಬೇಕಣ್ಣ.
ವಿರಹ ಆನ್ನೋ ವಿಷವನ್ನ,
ಕುಡಿಸುತ್ತಾನೆ ಬ್ರಹ್ಮಣ್ಣ,
ಸತ್ಯವಾದ ಪ್ರೇಮಿಗಳಿಗೆ, ಇಂತ ಬಹುಮಾನ.

ನಮ್ಮ ಖಳನಾಯಕ,
ಮೇಲೆ ಇರೋ ಮಾಲೀಕ,
ಕಾಲ ಕಡು ಕಿಚಕ,
ಪ್ರೀತಿ ಕೋಲೆ ಪಾತಕ.

ಹಣೆಬರಹಕೆ ಹೋಣೆ ಯಾರು?
ಇಲ್ಲಿ ಬೊಂಬೆ, ಅಲ್ಲ್ ಯಾರು?
ಯಾವ ಮದ್ದೆ ಇರದಂತ ನೋವು ನೂರಾರು.
ಇತಿಹಾಸ ಆಗೋರು,
ಪ್ರೀತಿಯಲ್ಲಿ ಸೋತೋರು,
ನಾವು ಚರಿತೆಯಾಗದೆ, ಸೇರಲಿ ಈ ಉಸಿರು.

ನಮ್ಮ ಖಳನಾಯಕ,
ಮೇಲೆ ಇರೋ ಮಾಲೀಕ,
ಕಾಲ ಕಡು ಕಿಚಕ,ಪ್ರೀತಿ ಕೋಲೆ ಪಾತಕ........

ಈ ಮೇಲಿನ ಸಾಲುಗಳು, ಯಾವುದೋ ಒಂದು ಚಿತ್ರದ ಹಾಡು. ನಾನು ಒಮ್ಮೆ ಎಫ್. ಎಂ ನಲ್ಲಿ ಕೇಳಿಸಿ ಕೊಂಡಿದ್ದು. ಈ ಸಾಲುಗಳು ನನ್ನ ಬದುಕಿಗೆ ಹೋಲಿಕೆಯಾಗುವಂತೆ ಇವೆ. ನನ್ನ ಮೋಬೈಲ್ ನಲ್ಲಿ ಈ ಹಾಡು ಸದಾ ಕೇಳಿಬರುತ್ತದೆ. ಈ ಸಾಲುಗಳನ್ನು ಬರೆದವರಿಗೆ ನನ್ನದೊಂದು ಪುಟ್ಟ ವಂದನೆ.

No comments:

Post a Comment