Friday, June 27, 2008

ಕೊಲಾಜ್----ಬದುಕಿನ ಬಿಡಿ ಬಿಡಿ ಚಿತ್ರ---ನನ್ನ ಬದುಕಿನ ಪ್ರೀತಿಯ ಪುಟಗಳಿಂದ





ಜೂನ್2,2008 ನಾನು ತುಮಕೂರಿಗೆ ವಿದಾಯ ಹೇಳೊ ದಿನ. ಒಂದು ಕಡೆ ಬೇಜಾರು, ಇನೊಂದು ಕಡೆ ಖುಷಿ. ಜೀವನದ Irony ಅಂದ್ರೆ ಇದೆ ಅಲ್ಲವೇ. ತುಮಕೂರು ತುಂಬಾನೆ ದೂಡ್ದ ಪಾಠ ಕಲಿಸಿಕೋಟ್ಟಿತು. ನನ್ಗೆ ಜೀವನದಲ್ಲಿ ತುಂಬಾನೆ ಧೈರ್ಯ ಬಂತು. ವಿಚಿತ್ರವಾದ ಜನಗಳನ್ನು ನೊಡ್ದೇ. ಎಲ್ಲರು ಚೆನ್ನಗಿ ಇದ್ವಿ, ಆದ್ರೆ ನನ್ನ ಬೆನ್ನ ಹಿಂದೆ ಜನ ಚೂರಿ ಹಾಕ್ಕಿದ್ದು ನನಗೆ ಗೊತ್ಗಲೆ ಇಲ್ಲ.ನಮ್ಮ director of sscms ಮಾತ್ರ very honest ಆಗಿ partiality ಮಡ್ತಿದ್ರು. ಆನ್ಯಾಯನ ಸಹಿಸಿಕೊಂಡು ಇರೋದಿಕ್ಕೆ ಆಗ್ತಾ ಇರ್ಲ್ಲಿಲ್ಲಾ.ಕೋನೆಗೆ ಆನೇಕ ಸಾರಿ ಪ್ರತಿಭಟಿಸಲು ಹೋಗಿ,ಮಾಡದ ತಪ್ಪಿಗೆ apology ಕೂಡ ಕೇಳಬೇಕಾಗಿ ಬಂತು. ಎಷ್ಟೋ ಸೂಕ್ಷ್ಮವಾದ ವಿಚಾರಗಳನ್ನು ಗೋತ್ತಿದ್ದರು ಮೂಕಳಾಗಿ ಸುಮ್ಮನಿರ ಬೇಕಾಗಿ ಬಂತು. ಡಿಗ್ರೀವರೆಗೂ ನಾನು ನೊಡಿದ್ದು only luxury life. ರಾಣಿ ಆಗಿ ಇದ್ದೇ sudden ಆಗಿ ಒಬ್ಬ ಮಾಮೂಲಿ ಹುಡುಗಿ ಥರಾ ಜೀವನ ನಡೆಸ ಬೇಕಾಗಿ ಬಂತು. ಕೋತ್ತಂಬರಿ ಸೋಪ್ಪೂ ತರೊದಿಕ್ಕು ನನ್ನ activa ನನ್ನ ಜೋತೆಗಿರುತಿತ್ತು. ಆದ್ರೆ ಅಲ್ಲಿ ಕಿಲೋಮೀಟರ್ ಉದ್ದಕ್ಕೂ ನಡೆ ಕೊಂಡು ಹೋಗ್ತಾ ಇದ್ದೆ. coffee dayನಲ್ಲಿ coffee ಕುಡಿತಾ ಇದ್ದ ನಾನು, ಚಿಕ್ಕದೊಂದು ಉಡುಪಿ ಹೋಟಲ್ ನಲ್ಲಿ 12Rsಗೆ full meals ತಿನ್ನುತಿದ್ದೆ!! ಈ ಮಟ್ಟಕ್ಕೆ ನನ್ನ lifestyle ಬದಲಾಗಿ ಹೋಗಿತ್ತು. Districtನಲ್ಲಿ ಲೈಫ್ ಸಾಗಿಸೋದು ತೀರ ಕಷ್ಟ ಅನ್ಸೊಕೆ ಶುರುವಾಯಿತು, ಈ courseನ ಬಿಟ್ಟು ಬಿಡ್ಡಬೇಕು, ವಾಪಸು ಬಂದಬಿಡ್ಬೆಕು ಅಂತ ತೀರ್ಮಾನ ಕೂಡ ಮಾಡಿದ್ದೆ. ಅದ್ರೆ ಸೋಲನ್ನು ಒಪ್ಪಿಕೋಳ್ಳೋದು ನನ್ಗೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಇಲ್ಲೆ ಇದ್ದು ಏನಾದರೂ ಸಾಧಿಸಬೇಕು ಅನ್ನೊ ಹಟ ಬಂತು. ಅನಂತರ ನಾನು ಓದಿದ್ದು, ಕಲಿತಿದ್ದು ಎಲ್ಲಾ ಒಂದು ತಪ್ಪಸ್ಸು.ತುಮಕೂರಿನಲ್ಲಿ ನನ್ನ ಗೆಳೆತನ ಬಹಳ ಸೀಮಿತವಾಗಿತ್ತು. ಯಾರು best friends ಆಗಲಿಲ್ಲಾ but a few people were dear to me for various reasons. ಎರಡು ವರ್ಷ ಕೇವಲ ಪುಸ್ತಕದ ಪುಟಗಳನ್ನು ತಿರುವಿ ಹಾಕಿದ ಹಾಗೆ ಕಳೆದು ಹೋಯಿತು. ಕಲಿತಿದ್ದು, ಕಲಿಸಿದ್ದು ಬಹಳ ಇದೆ. ವಿದಾಯ ಹೇಳೋ ಈ ಟೈಮ್ ನಲ್ಲಿ ನನಗೆ ನೆನಪಾಗಿದ್ದು ಮಾತ್ರ ಈ ಸಾಲುಗಳು............................

ಮನಸು ಹೇಳ ಬಯಸಿದೆ ನೂರೊಂದು

ತುಟಿಯ ಮೇಲೆ ಬಾರದಿಹೆ ಮಾತೊಂದು

ನೆನಪು ನೂರು ಎದೆಯಲಿ, ಅಗಲಿಕೆಯ ನೋವಲಿ

ವಿದಾಯ ಗೆಳೆಯನೆ, ವಿದಾಯ ಗೆಳತಿಯೆ

ವಿದಾಯ ಹೇಳ ಬಂದಿರುವೆ ನಾನಿಂದು

ನಾನು ಬೇರೆ, ನೀನು ಬೇರೆ, ಹೇಗೋ ಬೆರೆತೆವು

ನಮ್ಮ ನಮ್ಮ ತಪ್ಪು ಒಪ್ಪು ಎಲ್ಲಾ ಅರಿತೆವು

ಮರೆಯ ಬೇಡ ಈ ದಿನವ, ತೋರೆಯ ಬೇಡ ಈ ಸ್ನೇಹವ

ದಾರಿ ಬೇರೆ ಆದರು, ನಮ್ಮ ಸ್ನೇಹ ಉಳಿಯಲಿ

ನೀ ಎಲ್ಲೆ ಇದ್ದರು, ಹೇಗೆ ಇದ್ದರು

ನೀ ನಾಳೆ ಕೇಳಬೇಡ ನಾನು ಯಾರೆಂದು.

ಗೂಡ್ ಬಾಯ್ ತುಮಕೂರು.:):)

No comments:

Post a Comment