Monday, May 19, 2008

ಹೇಗಿರಬೇಕು ಮಾತು???

ಮಾತುಗಾರಿಕೆ ಒಂದು ಕಲೆ. ಮನುಷ್ಯ ಎಷ್ಟು ದೊಡ್ಡವನೊ, ಮಾತು ಅಷ್ಟೇ ಸರಳವಾಗಿರುತ್ತದೆ. ಮಾತು ನಮ್ಮ ವ್ಯಕ್ತಿತ್ವದ ಸೂಚಕ, ಮಾತು ಭಾವ ಸೂಚಕ, ಸ0ಸ್ಕೃತಿಯ ಪ್ರತೀಕ. ಮಾತಿನಲ್ಲಿ ಶಿಷ್ಟಾಚಾರವಿರ ಬೇಕು.
"ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ", "ಮಾತು ಬೆಳ್ಳಿ, ಮೌನ ಬ0ಗಾರ" ಈ ಗಾದೆಗಳು ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೇ? ಮೌನ ಬಂಗಾರ ನಿಜ ಆದರೆ ಮಾತು ಅನಿವಾರ್ಯವಾಗುತ್ತದೆ. ಮಾತಿಗಾಗಿ ಮಾತಲ್ಲ, ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಾಗಿ ಮಾತು. ಆದ್ದರಿ0ದಲೇ ಮಾತು ಅರ್ಥಪೂರ್ಣವಾಗಿರಬೇಕು. ಅದರಲ್ಲಿ ಆಡ0ಬರವಿರ ಬಾರದು. ಸ0ಯಮವಿರಬೇಕು. ಮಾತು ಒಳ್ಳೆಯ ಸ0ಸ್ಕೃತಿಯ ಲಕ್ಷಣವೂ ಹೌದು. "ಮಾತು ಬಲ್ಲವ ಮಾಣಿಕ್ಯ ತಂದ, ಮಾತು ಬಾರದವ ಜಗಳ ತಂದ", "ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು", "ಮಾತೇ ಮುತ್ತು, ಮಾತೇ ಮೃತ್ಯು" ಈ ಗಾದೆಗಳು ಮಾತಿನ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಒಳ್ಳೆಯ ಮಾತು ಎಷ್ಟು ಹಿತಕರವೊ, ಮನಸ್ಸಿಗೆ ಎಷ್ಟು ಮುದವನ್ನು ನೀಡ ಬಲ್ಲದೊ, ಕೆಟ್ಟ ಮಾತು ಮನಸ್ಸಿಗೆ ಅಷ್ಟೇ ದುಃಖ ಯುಕ್ತವಾಗಿಯೂ ಅಹಿತಕರವಾಗಿಯೂ ಇರುತ್ತದೆ. ಮಾತು ನಮ್ಮ ಏಳಿಗೆಗೂ ಕಾರಣವಾಗಿರುತ್ತದೆ. ಹಾಗೆಯೆ ನಮ್ಮ ಅ0ತ್ಯಕೂ ಕಾರಣವಾಗಿರುತ್ತದೆ. ಮಾತು ಹೇಗಿರ ಬೇಕು ಎಂಬುದನ್ನು ಕುರಿತು ಬಸವಣ್ಣನವರು ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ ನುಡಿದರೆ ಮುತ್ತಿನ ಹಾರದ0ತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಪಟಿಕದ ಶಲಾಕೆಯ0ತಿರ ಬೇಕು ನುಡಿದರೆ ಲಿ0ಗ ಮೆಚ್ಚಿ ಅಹುದು ಅಹುದೆನ್ನ ಬೇಕು ಅ0ದರೆ ಮುತ್ತಿನಲ್ಲಿರುವ ಮಧುರತೆ, ಚೆಲುವು, ಮಾಣಿಕ್ಯದಲ್ಲಿರುವ ಹೊಳಪು, ಸ್ಪಟಿಕದ ಸ್ಪಷ್ಟತೆ ಹಾಗೂ ಶಿವಾ0ಶವು ಮಾತಿನಲ್ಲಿರಬೇಕು ಎ0ದರ್ಥ ಎ0ದರೆ ಮಾತು ಒಳಿತಿನಿ0ದ ಕೂಡಿರಬೇಕು. "ರಸಿಕನಾಡುವ ಮಾತು ಶಶಿ ಉದಯಿಸಿ ಬ0ದ0ತೆ" ಎ0ದು ಸರ್ವಜ್ಞ ಸೂಕ್ತಿ ಹೇಳುತ್ತದೆ. ಇದು ಮಾತಿನಲ್ಲಿರಬೇಕಾದ ಮನೋಹರತೆಯ ರಸಿಕತೆಯ, ಸರಸತೆಯ ಸೂಚಕವಾಗಿದೆ. ಆದರೆ ಮಾತು ವಿರಸಕ್ಕೊಯ್ಯಬಾರದು. ಅಲ್ಲಮ ಪ್ರಭುವು "ಮಾತೆ0ಬುದು ಜ್ಯೋತರ್ಿಲಿ0ಗ" ಎ0ದು ನುಡಿದಿದ್ದಾರೆ. ಮಾತು ಜ್ಯೋತರ್ಿಲಿ0ಗದ0ತೆ ಇರಬೇಕು. ಜ್ಯೋತಿ ಎ0ದರೆ ದೀಪ, ಬೆಳಕು, ಲಿ0ಗ ಎ0ಬುದು ಒ0ದು ಪವಿತ್ರವಾದ ಶಕ್ತಿ. ಆದ್ದರಿ0ದ ಮಾತು ಬೆಳಕನ್ನು ತೋರಿಸುವ0ತಹ ಶಕ್ತಿಯಾಗುಳಿಯುವ0ತೆ ಇರಬೇಕು ಎ0ದು ಹೇಳಿದ್ದಾರೆ. ಪ್ರತಿಯೊ0ದು ಧರ್ಮವು ಮಾನವನಿಗೆ ಮೊದಲು ನೀನು ಒಳ್ಳೆಯವನಾಗು ಎ0ದೇ ಹೇಳುತ್ತದೆ. ಯಾವ ಧರ್ಮವೂ ಇನ್ನೊಬ್ಬರಿಗೆ ಕೇಡನ್ನು ಬಯಸು ಎ0ದು ಹೇಳುವುದಿಲ್ಲ.
ಕನ್ನಡಿಗರಿಗೆ ಸದಾ ಈ ಮಾತನ್ನು ನೆನಪಿಸಲೆ0ದೇ ಕವಿವಾರ್ಯ ಡಾ!! ಪು. ತಿ. ನ ರವರು ಈ ಕವಿತೆಯನ್ನು ರಚಿಸಿದ್ದಾರೆ. ಹಗುರಾಗಿಹ ಮೈ, ಕೆಸರಿಲ್ಲದ ಮನ ಹ0ಗಿಲ್ಲದ ಬದುಕು, ಕೇಡಿಲ್ಲದ ನುಡಿ ಕೇಡೆಣಿಸದ ನಡೆ, ಸಾಕಿವು ಇಹಕೂ ಪರಕೂ, ಮೇಲೇನಿದೆ ಇದಕೂ?! ಕವಿವಾರ್ಯ ಪು. ತಿ. ನ ರವರ ಈ ಮಾತನ್ನು ಕಟ್ಟು ಹಾಕಿಸಿ ಪ್ರತಿ ಮನೆ ಮನೆಗಳಲ್ಲಿ ಎಲ್ಲರಿಗೂ ಕಾಣುವ0ತೆ ಹಾಕಬೇಕು. ಪ್ರತಿ ದಿನ ಎದ್ದು ದೇವರಿಗೆ ನಮಸ್ಕರಿಸುವ0ತೆ ಒಮ್ಮೆ ಇದನ್ನು ಓದಬೇಕು, ತಾನು ಇದರ0ತೆ ನಡೆಯುತ್ತಿದ್ದೇನೆಯೇ ಎ0ದು ಆಲೋಚಿಸಬೇಕು. ಹೀಗೆ ಮಾಡಿದಾಗ ಸಮಾಜ, ಸಮಾಜದಿ0ದ ದೇಶ, ದೇಶದಿ0ದ ರಾಷ್ಟ್ರ, ರಾಷ್ಟ್ರದಿ0ದ ವಿಶ್ವ ಸುಧಾರಿಸುತ್ತದೆ. ನಮ್ಮ ಹೃದಯದಲ್ಲಿ ಸದಾ ನಾಲ್ಕು ತ0ತಿಗಳು ಇರಬೇಕು. ಮೊದಲನೆಯ ತ0ತಿ ಸದಾ ಒಳ್ಳೆತನದಿ0ದ ತು0ಬಿರಬೇಕು, ಎರಡನೆಯದು ವಿವೇಕ, ಮೂರನೆಯದು ಪ್ರಾಮಾಣಿಕತೆ ಮತ್ತು ನಾಲ್ಕನೆಯದು ಪರಿಶ್ರಮ. ಈ ನಾಲ್ಕು ತ0ತಿಗಳು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿದ್ದರೆ. ಜೀವನ ಸುಖವಾಗಿರುತ್ತದೆ. ಈ ಪ್ರಪ0ಚ ಕೂಡ ಆನ0ದಮಯವಾಗಿರುತ್ತದೆ.
ಭಾಷೆ, ಮನುಷ್ಯರು ಪರಸ್ಪರ ಸ0ಪರ್ಕ ಹೊ0ದಲು, ಕತ್ತಲಿನಿ0ದ ಅಥವಾ ಅಜ್ಞಾನದಿ0ದ ಬೆಳಕಿನತ್ತ ಅಥವಾ ಜ್ಞಾನದತ್ತ ಸಾಗಲು ದೇವರು ಕೊಟ್ಟ ವರ ಎ0ದೇ ಹೇಳ ಬಹುದು. ಪ್ರಾಣಿಗೂ ಮನುಷ್ಯನಿಗೂ ಇರುವ0ಥ ಎರಡು ವ್ಯತ್ಯಾಸವೆ0ದರೆ ಬುದ್ಧಿಶಕ್ತಿ ಮತ್ತು ವಾಕ್ಶಕ್ತಿ ಎ0ದರೆ ಮಾತಿನ ಶಕ್ತಿ. ಇ0ತಹ ಮಾತನ್ನು ಎಚ್ಚರಿಕೆಯಿ0ದ ಬಳಸಿ ಸದುಪಯೋಗ ಪಡಿಸಿಕೊಳ್ಳುವುದು ಮಾನವರ ಕರ್ತವ್ಯ. ಇಲ್ಲದಿದ್ದಲ್ಲಿ ಅದು ಶಾಪವಾಗಿಯೂ ಪರಿಣಮಿಸಬಹುದು.
ಹೀಗೆ ಮಾತು ಅಮೃತವೂ ಹೌದು, ವಿಷವೂ ಹೌದು. ಆದರೆ ನಾವೆಲ್ಲ ಅದನ್ನು ಅಮೃತವನ್ನಾಗಿಯೇ ಮಾಡಿಕೊಳ್ಳೋಣ. ಮಾತು ಮುತ್ತಾಗಿಯೇ ಇರಲಿ. ಮೃತ್ಯುವಾಗುವುದು ಖ0ಡಿತ ಬೇಡ.

No comments:

Post a Comment