Saturday, August 22, 2009

ಶ್ರಾವ್ಯ ಹೀಗೆ....

ಎಲ್ಲರ ದುಃಖವ ಕೇಳುವ ಅಭ್ಯಾಸ
ಸಾಧ್ಯವಾದರೆ ಪರಿಹಾರ ಸೂಚಿಸುವ ಸಾಹಸ
ನನ್ನ ಸಂತೋಷವ ಎಲ್ಲರಲ್ಲಿ ಹಂಚಿಕೊಳ್ಳುವ ಹವ್ಯಾಸ
ಎಲ್ಲರು ಇದ್ದಲ್ಲಿ ಮಾಡಲು ಹೋಗುವೆ ಹಾಸ್ಯ

ಎನ್ನ ಸಂತೋಷವ ಎಲ್ಲರಲ್ಲಿ ಹಂಚಿಕೊಳ್ಳುವ ಹವ್ಯಾಸ
ಎಲ್ಲರು ಇದ್ದಲ್ಲಿ ಮಾಡುವೆ ಹಾಸ್ಯ
ಈಗೆ ಮರೆಯುವೆ ನನ್ನ ನೋವ
ಇದೇ ನನ್ನ ನಗು ಮುಖದ ರಹಸ್ಯ

ಯಾರಲ್ಲೂ ಹಂಚಿಕೊಳ್ಳಲು ಇಚ್ಛಿಸಲಾರೆ ನನ್ನ ದುಃಖ
ಯಾರಿಗೂ ಮಾಡಲಿಚ್ಛಿಸಲಾರೆ ಮೋಸ
ಎಲ್ಲರಲ್ಲೂ ಬಯಸುವೆ ಸ್ನೇಹವ
ಕೆಲವರಲ್ಲಿ ಕಂಡೆ ಆತ್ಮೀಯ ಭಾವ
ಅವರಲ್ಲಿ ಕೆಲವರು ದೂರಾಗುತ್ತಿರುವುದನ್ನು ನೋಡಿದರೆ
ಜೀವ ಶುರುವಾಗುತ್ತದೆ ಕೊಡಲು ಚಡಪಡಿಸುವ ಮಾನಸಿಕ ನೋವ

2 comments:

  1. ಶ್ರಾವ್ಯ..ಹೆಸರಿನಂತೆ..ಎಲ್ಲವನ್ನು ಗ್ರಹಿಸುವ ಮನೋಭಾವ ನಿಮ್ಮದೆಮ್ದು ಕಾಣುತ್ತೆ. ಸಕಲಜನ ಸುಖಿನೋ ಭವಂತು (ಸರ್ವೇ ಜನ ಹೇಳಲಿಲ್ಲ ಯಾಕೆ ಅಂದ್ರೆ...ಲ್ಯಾಂಡ್ ಸರ್ವೇ ಗೆ ಅಂತ ಬರ್ತಾರಲ್ಲ ಅವರು ಅಂತ ಆಗ್ಬಾರ್ದಲ್ಲ...ಹಹಹ...) ನಿಮ್ಮ ಸಿದ್ಧಾಂತ ಈ ಕವನದಲ್ಲಿ ಕಾಣುತ್ತೆ. ಒಳ್ಲೆಯ ಪ್ರಯತ್ನ..ಮುಂದುವರೆಸಿ. ನನ್ನ ಬ್ಲಾಗಿಗೂ ಬನ್ನಿ..jalanayana.blogspot.com

    ReplyDelete
  2. ಶ್ರಾವ್ಯ ನಿನ್ನ ಕೆಲವು ಕವಿತೆಗಳನ್ನು ತಿದ್ದಿ ಹೀಗಿದ್ದರೆ ಇನ್ನೂ ಚೆನ್ನಾಗಿರುವದಲ್ಲ ಎಂದು ಅಂದು ಕೊಂಡಿರುವೆ. ಇದು ನನ್ನಷ್ಟಕ್ಕೆ ನಾನು ಮಾಡಿಕೊಂಡ ಒಂದು ಬದಲಾವಣೆ. ಇದನ್ನು ನೀನು ಒಪ್ಪಬೇಕೆಂದೆನೋ ಇಲ್ಲ. ಕವಿತೆಗಳಲ್ಲಿ ಒಂದು ಪದವು ಹೆಚ್ಚಾಗಬಾರದು. ಒಂದು ಪದವೂ ಕಡಿಮೆಯಾಗಬಾರದು. ಮತ್ತು ಕವಿತೆ ವಾಚ್ಯವೂ ಆಗಬಾರದು. ಕಾವ್ಯ ಆತ್ಮದ ಕೂಗು ಎನ್ನುವ ರೀತಿಯಲ್ಲಿ ರೂಪಕವಾಗಬೇಕು.ಶ್ರಾವ್ಯಳ ಕವಿತೆ ಎಂದರೆ ಆಕಯ ಸಹಿಯಂತಿರಬೇಕು. ತನ್ನತನ ಒಂದು ಕಾಣಬೇಕು. ನಿನ್ನ ಕವಿತೆಗಳನ್ನು ತಿದ್ದುವಾಗ ನಿಮ್ಮ ಅಜ್ಜನ ಉಂಗುರ ನೀಡಿದ ಕವಿತೆಯನ್ನು ತಿದ್ದಲು ನಾನು ಹೋಗಿಲ್ಲ. ತೀರಾ ಆಪ್ತವಾದ ಈ ಕವಿತೆ ತನ್ನದೇ ಆದ ರೂಪಕವಾಗಿ ಕಂಡಿತು ನನಗೆ. ಇದನ್ನು ಇನ್ನಿಷ್ಟು ನೀನೇ ತಿದ್ದುವ ಮೂಲಕ ಒಂದು ಒಳ್ಳೆಯ ಪದ್ಯವನ್ನು ಕನ್ನಡ ಸಾಹಿತ್ಯಕ್ಕೆ ನೀಡುವಂತಾದರೆ ಚೆನ್ನ ಎಂದು ನನ್ನ ಭಾವನೆ. ಅಂದ ಹಾಗೇ ನಿಮ್ಮಂತವರ, ನಿಮ್ಮ ನೋವುಗಳು ಸಾಹಿತ್ಯ ಲೋಕದಲ್ಲಿ ದಾಖಲಾಗಬೇಕು. ಅದಕ್ಕೆ ಪದಗಳ ಹಂಗಿಗೆ ಒಳಗಾಗದೇ ಜೀವನ ಅನೇಕ ಹಂಗಿಗೊಳಗಾದ ಬದುಕುತ್ತಿರುವ ನಿಮ್ಮ ರೀತಿಯಲ್ಲಿ ಕಾವ್ಯವೂ ಹೊರಬರಲಿ ಎಂದು ಹಾರೈಸುವೆ. ಶ್ರಾವ್ಯ ಈಗ ಆರೋಗ್ಯ ಹೇಗಿದೆ? ಚೆನ್ನಾಗಿರಬೇಕು ಎಂದು ಹಾರೈಸುವೆ. ಯಾವದಕ್ಕೂ ಪತ್ರ ಬರೆಯರಿ..
    ವಂದನೆಗಳು.
    - ಪರಶು



    ಸೋತ ಮನಸ್ಸಿನ ರಾಗ

    ಮನಸ್ಸಿನಾಳದ ಭಾವನೆಗಳ
    ಯಾರಲ್ಲಿ ತೋಡಿಕೊಳ್ಳಲಿ
    ನೋವ ಹೇಗೆ ಸಹಿಸಲಿ
    ಹೃದಯದ ಕಡಲಲಿ


    ಮಿಂಚಿನಂತೆ ಬಂದು
    ಬಂದಷ್ಟೆ ವೇಗವಾಗಿ ಮರೆಯಾದ
    ಗೆಳೆಯನ ಹೇಗೆ ಮರೆಯಲಿ


    ಪ್ರೀತಿಯ ಬೀಜ
    ಮರವಾಗಿ
    ಹೂವು, ಹಣ್ಣು ಬಿಡಲಾಗದೆ
    ತೊಳಲಾಡುತ್ತಿದೆ
    ಈ ನೋವ ಹೇಗೆ ಮರೆಮಾಚಲಿ


    ನೀನಾಡಿದ ನೂರು ಮಾತು
    ತರಗಲೆಯಾಗಿ ಹೋಗಿವೆ


    ನಿನ್ನ ಕಣ್ಣ ಕಾಂತಿಯಲಿ
    ಸೋತ ಮನಸ್ಸಿನ ಭಾವನೆಯ ರಾಗದಲಿ
    ನಾ ದಿನ ಕಳೆಯುತಿರುವೆ
    ನೀ ನಿಲುಕದ ದೂರದಲಿ.....


    ಶ್ರಾವ್ಯ

    ಎಲ್ಲರ ದುಃಖವ ಕೇಳುವ
    ಸಾಧ್ಯವಾದರೆ ಪರಿಹಾರ ಸೂಚಿಸುವ
    ಸಂತೋಷ ಹಂಚಿ ಕೊಳ್ಳುವ
    ನಗುವ ಹಂಚುವ
    ಒಳಗಡೆ ನೋವ
    ಮರೆಮಾಚುವ ನಗುಮುಖವ

    ಕೆಲವರಲ್ಲಿ ಕಂಡೆ ಆತ್ಮೀಯಭಾವ
    ದೂರವಾಗುವದನ್ನು ಕಂಡರೆ
    ಅದು ಕೂಡಾ ಒಂದು ಮುಖವಾಡವೇ?



    ಶರಣು

    ತಪ್ಪು ಮಾಡಿದರೆ
    ಮೋಸ ಮಾಡಿದರೆ
    ಶರಣಾಗು ನೀನು
    ಇಲ್ಲವಾದರೆ ಬಿರುಗಾಳಿಯಲ್ಲಿ ನೀನು
    ಸಿಲುಕಿ ನರಳುವೆ;
    ಮನಸ್ಸಲ್ಲಿ ನೂರು ಚಿಂತೆಗಳು

    ಕಣ್ಣಗಳಲ್ಲಿ ಪ್ರೀತಿಯ ತೋರು
    ಹೃದಯದಲಿ
    ಎಳೆಯುವುದು ಸತ್ಯದ ತೇರು

    ಮೈಯೆಲ್ಲಾ ವಿಷವನು ಕಾರಿ
    ಮನಸ್ಸಲ್ಲಿ ಹೊಂಚು ಹಾಕಿ
    ದ್ರೋಹ ಮಾಡಬೇಡ
    ದೇವರು ನೋಡುತಿಹನು...
    ಮೊಗಚಿ ಹಾಕುವನು ನಿನ್ನನು

    ನಡೆ ಮುಂದೆ ಎಂದಿದೆ ಬದುಕು
    ಜೊತೆಯಲ್ಲಿದೆ ದೇವರ ಬೆಳಕು
    ಎಡವದಿರು...

    ---------------------------------------------

    ತಾತನೂ ಇಲ್ಲ, ಉಂಗುರವೂ ಇಲ್ಲ..

    ಉಂಗುರ ತೊಡಿಸಿದರಲ್ಲ
    ಎಂಥಾ ತಳಮಳ
    ಎಂಥಾ ಪುಳಕ
    ಎಂಥಾ ಜಳಕ
    ನನ್ನ ಅಜ್ಜಿಯ ಉಂಗುರವದು
    ಸಿಕ್ಕ ತಕ್ಷಣ ನಾ ಹೊಡೆದೆ ಡಂಗುರ


    ಬಾಳ ತಿರುವು ನೀಡುವ ಹತ್ತನೇ ತರಗತಿ
    ಅಂದು ಕೊಂಡಿದ್ದೆ ಗಣಿತದಲ್ಲಿ ಆಗುವುದು ಆಧೋಗತಿ
    ದೇವರ ದಯೆ ನನ್ನ ಮೇಲಿತ್ತು
    ಉತ್ತಮ ಅಂಕಗಳು ನನ್ನ ಕೈಲಿತ್ತು


    ಎಲ್ಲರೂ ಹೊರಟರು "ಜ್ಞಾನದ ಹಾದಿ "ಡಿದು
    ೮೦% ಬಂದ್ರು, ನಾ ಹೊರಟೆ ಕಲೆಯ ಬೆನ್ನತ್ತಿ
    ಗುರಿಯಾದೇ ಆನೇಕರ ಟೀಕೆಗೆ
    ಆದ್ರೆ ಅನಕ್ಷರಸ್ತರಾದ ತಾತನ ಹೊಗಳಿಕೆ


    ಉಡುಗೊರೆ ಕೊಟ್ಟರು ನನಗೆ ಒಂದು ಉಂಗುರ
    ದಿನಗಳು ಕಳೆದಂತೆ....
    ನಾನು ಆದನ್ನು ಜೋಪಾನವಾಗಿಟ್ಟು ಕೊಂಡಿದ್ದೆ
    ಆದು ಮುಂದೆ ಚೆನ್ನಾಗಿ ಓದಲು ಸ್ಪೂರ್ತಿಯಂತಿತ್ತು


    ಕಾಲನ ಕರೆಗೆ ಕಿ"ಗೊಟ್ಟು
    ತಾತ ಪಂಚ ಭೂತಗಳಲ್ಲಿ ಲೀನವಾದರು
    ಆ ಉಂಗುರವು ಒಂದು ವರ್ಷದ "ಂದೆ
    ನೀರು ಪಾಲಾತೋ
    "ನು ಪಾಲಾತೋ
    ತಾನೇ ಕಳಚಿ ಕೊಂಡಿತೋ
    ನಾನೇ ಕಳಚಿ ಕೊಂಡೆನೋ
    ಆದನ್ನ ಮಾತ್ರ ಕೇಳಬೇಡಿ
    ನಾನು ಹೇಳೊದಿಲ್ಲ!!!

    ReplyDelete