ಮನಸ್ಸಿನಾಳದ ಭಾವನೆಗಳ
ಯಾರಲ್ಲಿ ತೋಡಿಕೊಳ್ಳಲಿ
ಭಾವನೆಗಳಿಂದ ಒದಗುವ ನೋವ ಹೇಗೆ ಸಹಿಸಲಿ
ಹೇಳಿಕೊಳ್ಳಲಾಗದ, ಆಳಲು
ಯಾರು ಸಿಗದ ಸ್ಥತಿಯಲಿ
ನರಳುತ್ತಿರುವೆ ನಾನು
ಹೃದಯದ ಕಡಲಲಿ
ಮಿಂಚಿನಂತೆ ಬಂದು
ತೇಲಿ, ತೇಲಿ
ಮರೆಯಾದ ನನ್ನ ಗೆಳೆಯನ
ಹೇಗೆ ತಾನೆ ಮರೆಯಲಿ
ಅವನು ಬಿತ್ತಿದ ಪ್ರೀತಿಯ ಬೀಜ
ಇಂದು ಮರವಾಗಿದೆ
ಹಣ್ಣು ಬಿಡಲಾಗದೆ
ಹೂ ಬಿಡಲಾಗದೆ ತೊಳಲಾಡುತ್ತಿದೆ
ನಿನ್ನೊಡನೆ ಕಳೆದ ದಿನಗಳ
ನಾ ಹೇಗೆ ತಾನೆ ಮರೆಯಲಿ
ನಾ ಹೇಗೆ ಮರೆಯಲಿ
ಮೌನದಲ್ಲೆ ನೀನಾಡಿದ ನೂರು ಮಾತು
ನಿನ್ನ ಕಣ್ಣ ಕಾಂತಿಯಲಿ
ಸೋತ ಮನಸ್ಸಿನ ಭಾವನೆಯ ರಾಗದಲಿ
ನಾ ಕಳೆಯುತ್ತಿರುವೆ ದಿನಗಳನು
ಆದರೆ ನೀ ಮಾತ್ರ....
ನನ್ನ ಭಾವನೆಗಳಿಂದ ನಿಲುಕದ ದೂರದಲಿ.....
No comments:
Post a Comment