Saturday, June 6, 2009

ತಾತನೂ ಇಲ್ಲ, ಉಂಗುರನೂ ಇಲ್ಲ.




ಉಂಗುರ ತೊಡಿಸಿದರಲ್ಲ
ಎಂಥಾ ತಳಮಳ
ಎಂಥಾ ಪುಳಕ
ಎಂಥಾ ಜಳಕ
ನನ್ನ ಅಜ್ಜಿಯ ಉಂಗುರವದು
ಸಿಕ್ಕ ತಕ್ಷಣ ನಾ ಹೊಡೆದೆ ಡಂಗುರ

ಭಾಳ ತಿರುವು ನೀಡುವ ಹತ್ತನೇ ತರಗತಿ
ಅಂದು ಕೊಂಡಿದ್ದೆ ಗಣಿತದಲ್ಲಿ ಆಗುವುದು ಆಧೋಗತಿ
ದೇವರ ದಯೆ ನನ್ನ ಮೇಲಿತ್ತು
ಉತ್ತಮ ಅಂಕಗಳು ನನ್ನ ಕೈಲಿತ್ತು

ಎಲ್ಲರೂ ಹೊರಟರು ವಿಜ್ಞಾನದ ಹಾದಿ ಹಿಡಿದು
೮೦% ಬಂದ್ರು, ನಾ ಹೊರಟೆ ಕಲೆಯ ಬೆನ್ನತ್ತಿ
ಗುರಿಯಾದೇ ಆನೇಕರ ಟೀಕೆಗೆ
ಆದ್ರೆ ಅನಕ್ಷರಸ್ತರಾದ ತಾತನ ಹೊಗಳಿಕೆ

ಉಡುಗೊರೆ ಕೊಟ್ಟರು ನನಗೆ ಒಂದು ಉಂಗುರ
ದಿನಗಳು ಕಳೆದಂತೆ....
ನಾನು ಆದನ್ನು ಜೋಪಾನವಾಗಿಟ್ಟು ಕೊಂಡಿದ್ದೆ 
ಆದು ಮುಂದೆ ಚೆನ್ನಾಗಿ ಓದಲು ಸ್ಪೂರ್ತಿಯಂತಿತ್ತು

ಕಾಲನ ಕರೆಗೆ ಕಿವಿಗೊಟ್ಟು
ತಾತ ಪಂಚ ಭೂತಗಳಲ್ಲಿ ಲೀನವಾದರು
ಆ ಉಂಗುರವು ಒಂದು ವರ್ಷದ ಹಿಂದೆ
ನೀರು ಪಾಲಾಯಿತೋ
ಮೀನು ಪಾಲಾಯಿತೋ
ತಾನೇ ಕಳಚಿ ಕೊಂಡಿತೋ
ನಾನೇ ಕಳಚಿ ಕೊಂಡೆನೋ
ಆದನ್ನ ಮಾತ್ರ ಕೇಳಬೇಡಿ
ನಾನು ಹೇಳೊದಿಲ್ಲ!!!

2 comments:

  1. ring vishayadalli helodilla kelbedi andre enri artha yarigadru gift kotraaaa...?
    kavana parvagilla innu swalpa try madidre bere kade kuda publish madabhudu... alva...?

    ReplyDelete
  2. ಶ್ರವ್ಯ,

    ಮೊದಲಿಗೆ ನಿಮ್ಮ ಹೆಸರು ತುಂಬಾ ಚೆನ್ನಾಗಿದೆ...

    ನಿಮ್ಮ ತಾತ ಕೊಟ್ಟ ಉಂಗುರವನ್ನು ನೀವು ಕಳೆದುಕೊಳ್ಳಬಾರದಿತ್ತು...
    ಕವನ ಸೊಗಸಾಗಿದೆ....ಅದಕ್ಕೆ ತಕ್ಕಂತೆ ಫೋಟೋ ಕೂಡ ಸೂಪರ್...
    ಧನ್ಯವಾದಗಳು...

    ಆಹಾಂ! ನನ್ನ ಬ್ಲಾಗಿನಲ್ಲಿ ಅಪ್ಪಂದಿರ ದಿನವಾದ ಇಂದು ಹೊಸ ಲೇಖನವನ್ನು ಹಾಕಿದ್ದೇನೆ...ಬಿಡುವು ಮಾಡಿಕೊಂಡು ನೋಡಿ...ಇಷ್ಟವಾದರೇ ನಾಲ್ಕು ಮಾತು ಕಾಮೆಂಟು ಬರೆಯಿರಿ.....

    http://chaayakannadi.blogspot.com/

    ಧನ್ಯವಾದಗಳು..

    ReplyDelete