Saturday, May 16, 2009

ಓ ಮಾತೆ ಕಾವೇರಿ ತಾಯಿ


ಬಳಿ ಸಾರಿ ಬಂದಿರುವೆ ನಾನು 
ಓ ಮಾತೆ ಕಾವೇರಿ ತಾಯಿ
ನಮ್ಮ ಪುಣ್ಯವೇ, ನೀನು ಇರಲು
ನಿನಿಂದ ನಿಸರ್ಗವೆಲ್ಲಾ ಸುಂದರ

ನೀನು ಕಡಲು ಸೇರುವ ಮುನ್ನ
ಈ ಭುವನವೆಲ್ಲಾ ಸ್ವರ್ಗ 
ನೀನು ಹರಿಯುತಲಿರೇ
ಬರಡು ಬಾಳೆಲ್ಲಾ ನಂದನ

ಮನವು ಸೌಮ್ಯ
ದುಮ್ಮಾನ ಶೂನ್ಯ
ನನ್ನ ಪಾದ ಸ್ಪರ್ಶಿಸುವೆ ಕಡಲ ತೀರದಲ್ಲಿ
ಅಮ್ಮ ದೂರ ಮಾಡು ಇರುಳು
ಸಂಕಷ್ಟದಲ್ಲಿ ಈ ಜಗತ್ತು ಇರಲು
ಮರಳಿ ಬರುವೆ ತಾಯಿ ನನ್ನ ಮನದ ದುಃಖ ನಿವಾರಣೆಗಾಗಿ

No comments:

Post a Comment