Sunday, May 10, 2009

Dont buy American products like pepsi, coke, intel,GE, ford,levis, lee, transcend, apple etc.until Obama take back his new policies of outsourcing to India. Indian job cuts in America. Think about country not fashion or status. If we buy Indian products it will create 5 crore jobs in our country and makes Indian economy strong.We will develop. Every Indian student will get a job. If you are a true Indian promote Indian products forward this sms to all. JAI HIND. 

ಹೀಗೆ ಒಂದು sms ನನ್ನ mobile phoneಗೆ ಬಂದಾಗ ನನಗೆ ನಗದೆ ಇರಲು ಆಗಲಿಲ್ಲ. ಈ smsನ ಒಮ್ಮೆ ಓದಿ ನೋಡಿ, ಪಕ್ಕಾ ಒಬ್ಬ ದೇಶ ಪ್ರೇಮಿ ಬರೆದ ಹಾಗೇ ಇದೆ. American productsನ, ಅಧ್ಯಕ್ಷ ಒಬಾಮ ಅವರ ವಿರುದ್ಧ ಪ್ರತಿಭಟಿಸಿದ ಹಾಗೆ ಕಾಣುತ್ತದೆ. ಮೇ ತಿಂಗಳ ಈ ಬಿರು ಬಿಸಿಲಿಗೆ ಭೂಮಿ ತಾಯಿ ಸುಟ್ಟು ನಲುಗಿದ್ದಾಳೆ. ಅಂತೆಯೇ recessionನ ಬಿಸಿ ಐಟಿ/ಬಿಟಿ ಯವರಿಗೆ ತಟ್ಟಿಯಾಗಿದೆ. ಈ ಐಟಿ/ಬಿಟಿ create ಮಾಡಿದಂತ effect ಒಂದೆರಡಲ್ಲ. ಆನೇಕ MNCಗಳು ಹುಟ್ಟಿಕೊಂಡವು, ಆ companyಗಳು ಅಲ್ಲಿನ ಉದ್ಯೋಗಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನ ಕೊಟ್ಟವು. ಅಲ್ಲಿನ ಉದ್ಯೋಗಿಗಳು ದಿಢೀರ ಶ್ರೀಮಂತರಾದರು. ನಮ್ಮ ಎಸ್. ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ಆನೇಕ ಐಟಿ/ಬಿಟಿ  ಕಂಪೆನಿಗಳು ಹುಟ್ಟಿಕೊಂಡವು. ಇವು ಆನೇಕರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದು ಸುಳ್ಳಲ್ಲ. ಹೀಗೆ ಮುಂದುವರಿದ ದಿನಗಳಲ್ಲಿ ಸ್ಕೂಲ್ ಮಕ್ಕಳೆಲ್ಲಾ ಐಟಿ/ಬಿಟಿ ಕನಸು ಕಾಣವಂತಾಯಿತು.

ಈಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಪದ ಆರ್ಥಿಕ ಹಿಂಜರಿತ/recession. ಬಹುತೇಕ ಮಂದಿಗೆ ಇಂದಿಗೂ ಸಹ ಈ ಪದದ ಆರ್ಥ ತಿಳಿದಿರಲಿಕ್ಕಿಲ್ಲ. ಕೆಲವು ತಿಂಗಳುಗಳಿಂದ ಆನೇಕ MNCಗಳಿಗೆ ಈ ಬಿಸಿ ತಟ್ಟಿದೆ. ಆನೇಕರು ತಮ್ಮ ಕೆಲಸದ ಗತಿ ನಾಳೆ ಏನಾಗ ಬಹುದೊ ಎಂದು ತಲೆ ಮೇಲೆ ಕೈಇಟ್ಟು ಕೂರುವಂತಾಗಿದೆ. ಕೆಲಸವನ್ನು ನಂಬಿ ಮನ ಬಂದಂತೆ ಲೋನ್ ಮಾಡಿದವರನ್ನು ಆ ದೇವರೆ ಕಾಪಾಡಬೇಕು. ಆಂತಹ luxury lifestyleಗೆ ಹೊಂದಿಕೊಂಡಿದ್ದ ಜನ ಈಗ ತಮ್ಮ ಕೆಲಸ ಕಳೆದು ಕೊಳ್ಳುವಂತಾಗಿದೆ. ಬಹುಶಃ ಯಾವ software engineer ಕೂಡ ನಮ್ಮ ದೇಶಕ್ಕೆ recessionಅನ್ನೋ ಬಿಸಿ ತಟ್ಟ ಬಹುದು ಅಂತ ಕನಸ್ಸಿನಲ್ಲಿಯು ಎಂದಿಗೂ ಯೋಚಿಸಿರಲಾರ.

ಅಸಲಿಗೆ ಈ  recession ಅನ್ನೋ ಪೆಂಡಂ ಭೂತ ನಮ್ಮನ್ನ ಕಾಡಲು ನಾವೇ ಕಾರಣ ಅನ್ನೋದು ನನ್ನ ಅಭಿಪ್ರಾಯ. Agriculture is the main occupation of India ಅಂತ ನಮ್ಮ ಸ್ಕೂಲ್ text booksನಲ್ಲಿ, economics subjectನಲ್ಲಿ ನಾವು ಓದುತ್ತಾ ಬಂದಿದ್ದೇವೆ. ನಮ್ಮ ಭಾರತ ದೇಶ ಮುಂದುವರಿಯುತ್ತಿರುವ ರಾಷ್ಟ್ರ. ಪ್ರತಿಯೊಬ್ಬರು, ತಾನು ವಿದ್ಯಾವಂತನಾಗಿ ಕೃಷಿಯನ್ನು ತನ್ನ ಉದ್ಯೋಗವಾಗಿ ಸ್ವೀಕರಿಸಲು ಎಲ್ಲರಿಂದ ಸಾಧ್ಯವಿಲ್ಲ. ಕಡೆ ಪಕ್ಷ ನಮ್ಮ ರೈತರ ಉದ್ದಾರಕ್ಕಾಗಿಯಾದರು ಶ್ರಮಿಸ ಬಹುದು. ಯಾವುದೋ ಕಾಲ್ ಸೆಂಟರ್‍ ಆಥವಾ MNCಗಳಿಗೆ ಉದ್ಯೋಗ ಅರಸಿ ಹೋಗುವುದನ್ನು ಬಿಟ್ಟು ನಮ್ಮ ದೇಶಕ್ಕಾಗಿ ಇರುವ ಸ್ವದೇಶಿ ಕಂಪೆನಿಗಳಿಗೆ ಕೆಲಸಕ್ಕೆ ಸೇರಿದ್ದರೆ. ಇವತ್ತಿನ ದಿವಸ ನಾವು recession ಎಂಬ ರಾಕ್ಷಸನ ಕೈಗೆ ಸಿಕ್ಕು ನರಳಬೇಕಾಗಿರಲಿಲ್ಲ. ಯಾವ ಒಬಾಮ ಏನೇ policies ಮಾಡಿದರೂ ನಾವು ಚಿಂತಿಸ ಬೇಕಾಗಿರಲಿಲ್ಲ. ಸುಮ್ಮನೆ ಈ smsನ ದೇಶ ಭಕ್ತಿ ಅಂತ forward ಮಾಡೊದು ಬಿಟ್ಟು ನಮ್ಮಲ್ಲಿ ಆ ಭಾವವನ್ನ ನಮ್ಮ ತನು ಮನದಲ್ಲಿ ತುಂಬಿ ಕೊಂಡು ನಮ್ಮ ದೇಶದ ಭವಿಷ್ಯಕ್ಕೆ ಒಂದು ಭದ್ರ ಬುನಾದಿ ನಿರ್ಮಿಸಲು ಶ್ರಮಿಸೋಣ. ಈಗ ಮನಸ್ಸಿನಲ್ಲಿ ಹೇಳಿ ಕೋಳ್ಳಿ ಜೈಹಿಂದ್.

No comments:

Post a Comment