Saturday, February 14, 2009

ಕೊಲಾಜ್-ಬದುಕಿನ ಬಿಡಿ ಬಿಡಿ ಚಿತ್ರ- ಅಣ್ಣನ ಪ್ರೀತಿ.

ಡಿಸೆಂಬರ ತಿಂಗಳು ಪೂರ್ತಿ ನನ್ನ ಪಾಲಿಗೆ ಒಂದು ಕೆಟ್ಟ ತಿಂಗಳಾಗಿ ಪರಿಣಮಿಸಿತು. ಒಂದು ರೀತಿ ಕರಾಳವಾಗಿತ್ತು. ತುಂಬ serious ಏನು ಆಗಲಿಲ್ಲ. But still, I suffered like anything. ಎಲ್ಲವು ಶುರುವಾದದ್ದು ಒಂದು ಸಣ್ಣ ಕೆಮ್ಮಿನಿಂದ. ಮೊದಮೊದಲು ಬರಿ ಕೆಮ್ಮು ಬಿಡು ಸರಿಹೋಗಾತ್ತೆ ಅಂತ ನಾನು neglect ಮಾಡಿದ್ದೆ, ಆದ್ರೆ ಆದು ನನ್ನ ನಿದ್ರೆ ಕಿತ್ತು ಕೊಂಡ ಮೇಲೆ ಆದರ ತೀವ್ರತೆ ನನಗೆ ಆರ್ಥವಾಗಿದ್ದು. ಎಷ್ಟೋ doctors ಬಳಿ ಹೋದ್ರು ಏನು ಪ್ರಯೋಜನವಾಗ್ಲಿಲ್ಲ. ಹೋದ ಕಡೆಯೆಲ್ಲಾ tablets, syrup ಅಂತ ಒಂದು ರಾಶಿ ಚಿಟಿ ತುಂಬ ಬರೆದು ಕೊಡ್ತಿದ್ರು. ನನಗೆ ಆದನೆಲ್ಲಾ ನುಂಗೊ punishment. ಆನೇಕ ಮನೆ ಔಷಧಿ ಸಹ ಪ್ರಯೋಗ ಮಾಡಿದ್ವಿ, ಮೆಣಸು, ಹಾಲು, ಆರಿಶಿನ ಪುಡಿ, ಜೀರಿಗೆ, ಶುಂಠಿ, ಇವೆಲ್ಲಾ ಫಲಕಾರಿಯಾಗದಿದ್ದಾಗ brandy, 1peg peters scotch whiskey ಹೀಗೆ ಇನ್ನೂ ಹಲವು! ಇದ್ಯಾವುದ್ದಕ್ಕು ಆ ದರಿದ್ರ ಕೆಮ್ಮು ಬಗ್ಗಲಿಲ್ಲ.
ಕೆಮ್ಮು ಹೋಗಿ ಜ್ವರ ಬಂತು, vomitting start ಆಯ್ತು, urine, motion ಎಲ್ಲಾ ಬಂದ್ ಆಗಿ ಹೋಯಿತು. ನಾನಿ ತುಂಬ ನಿಶಕ್ತಳಾಗಿ ಬಿಟ್ಟೆ. ಎದ್ದು ನಿಲ್ಲಲು ಆಗದಂತಹ ಪರಿಸ್ಥಿತಿ. ಆದೊಂದು ದಿನ I was admitted to hospital. ಅಲ್ಲಿ ಹೋದ ನಂತರ ನನ್ನ temperature 103degreeಗೆ ಏರಿತ್ತು. ಮೈಯೆಲ್ಲಾ ಕೆಂಡದಂತೆ ಸುಡುತಿತ್ತು. Hospitalನಲ್ಲಿ ಯರಾದ್ರು ನನ್ನ ಜೋತೆ ಉಳಿದುಕೊಳ್ಳ ಬೇಕಿತ್ತು ಆಗ ಅಣ್ಣ ಉಳಿದು ಕೊಳ್ತಾ ಇದ್ದ. ಈ ಟೈಮ್ ನಲ್ಲಿ ನಮ್ಮಿಬ್ಬರ ಮಧ್ಯೆ ಒಂದು bonding ಬೆಳೆದು ಹೋಯಿತು. ಅಣ್ಣ ಮದುವೆ ಆದಾಗಿನಿಂದ ನಮ್ಮಿಬ್ಬರ ಸಂಬಂಧ ಅಷ್ಟಕ್ಕೆ ಅಷ್ಟೆ. ಅಣ್ಣ ಯಾವುದ್ದಕ್ಕೂ ನನ್ನ ಬಗ್ಗೆ ಕ್ಯಾರೆ ಅಂತ ಇರಲಿಲ್ಲ. ನಾನು ಸಹ ಮಾತನಾಡಿಸೊದು ನಿಲ್ಲಿಸಿದ್ದೆ. ಒಂದೇ ಮನೆನಲ್ಲಿ ಇದ್ರು ನಾವು ಚೆನ್ನಾಗಿರಲಿಲ್ಲ.
ಇವೆಲ್ಲಾ ಎಲ್ಲರ ಜೀವನದಲ್ಲಿ ನಡೆಯೋದೆ ಬಿಡಿ. ಆದರೆ ಈ hospitalನಲ್ಲಿ ಇದ್ದಾಗ ಅಣ್ಣ ನನ್ನ ಬಗ್ಗೆ care ತೆಗೆದುಕೊಂಡಿದ್ದು simply great. ಒಂದು ಚಿಕ್ಕ ಮಗು ರೀತಿ ನನ್ನನ್ನು ನೋಡಿಕೊಂಡ. ೫ದಿನ ಆದೆ ಪ್ರೀತಿಯಿಂದ ನನ್ನನ್ನು ನೋಡಿ ಕೊಂಡ. ನನಗೆ ಆ drips ಹಾಕಿರೊ ನೋವಿನಲ್ಲೂ ಇದೊಂದೆ ಖುಷಿ. ನಾನು ಎಚ್ಚರವಾಗಿರುವಾಗಲೆಲ್ಲಾ ತುಂಬ ಹೊತ್ತು ಮಾತಾಡ್ತಾ ಇದ್ವಿ, feelings share ಮಾಡ್ತಾ ಇದ್ವಿ. ಅವನು ನನ್ನನ್ನು ಪಾಪು ಅಂತ ಕರಿತಾ ಇದ್ದ ರೀತಿ. ನನ್ನ ಮನಸ್ಸಿಗೆ ನೋವಿನಲ್ಲೂ ಒಂಥರ ಖುಷಿಯಾಗಿತ್ತು. ಮನೆಗೆ ಬಂದ ಮೇಲೆ ಇದೆಲ್ಲಾ ಇರೊದಿಲ್ಲ ಅಂತ ಭಾವಿಸಿದ್ದೆ but nothing has changed. ಈ ಭಾಗ್ಯ ಕರುಣಿಸಿ ಕೊಟ್ಟ ದೇವರಿಗೆ ಒಂದು ಪುಟ್ಟ ಧನ್ಯವಾದ.
ಇದೆಲ್ಲದರ ಮಧ್ಯೆ ನಾನು discharge ಆಗಿ ಮನೆಗೆ ಬಂದೆ. ನನಗೆ ಇದ್ದ dirty lifestyle change ಆಯ್ತು. ಬೆಳಗೆ ಬೇಗ ಎದ್ದೇಳ್ತಾ ಇದ್ದೀನಿ, ರಾತ್ರಿ ಬೇಗ ಮಲಗ್ತೀನಿ. ನಾಲ್ಕು ಕೆಜಿ ತೂಕ ಕಡಿಮೆ ಆಯ್ತು. Body light ಆಗಿ feel ಆಯ್ತು. ಆದರೆ ಮನಸ್ಸಿಗೆ ಬೇಡದೆ ಇರೊ ಚಿಂತೆಯೊಂದು ಕಾಡೊದ್ದಿಕ್ಕೆ ಶುರುವಾಯ್ತು ಆದು ನನ್ನ job ವಿಷಯ.Msc ಮುಗಿಸಿ ೬ ತಿಂಗಳಾದರೂ ನನಗೆ ಸರಿಯಾದ ಕೆಲಸ ಇಲ್ಲ ಅನ್ನೋದು ನನ್ನನ್ನ ತುಂಬ ಕಾಡ್ತಾ ಇದೆ. ಕಡೆಯದಾಗಿ media field ಅಷ್ಟೆ ಅಲ್ಲಾ ಯಾವುದಾದರೂ ಒಂದು ಕಡೆ ಎಷ್ಟು ಸಂಬಳಕ್ಕಾದರೂ ಸರಿ ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡಿ ಹುಡುಕುತ್ತಿದ್ದೇನೆ ನೋಡೋಣ ದೇವರು ಏನು ಪ್ರಸಾದ ಕೊಡ್ತಾನೆ ಅಂತ.

No comments:

Post a Comment