Tuesday, December 16, 2008

ಕೊಲಾಜ್; ಬದುಕಿನ ಬಿಡಿ ಬಿಡಿ ಚಿತ್ರ


ಏನು ಅಂತ ಬರಿಲಿ. ಕೆಲವು ದಿನಗಳಿಂದ ನಾನು ಅನುಭವಿಸ್ತಾ ಇರೊ ನೋವು ಇದೆಯಲ್ಲಾ ಆದು ಯಾರಿಗೂ ಬೇಡ ದೇವರೆ. ದೇಹದ ನೋವಾದರೂ ಸಹಿಸಬಹುದು, ಆದ್ರೆ ಮಾನಸಿಕ ಯಾತನೆ ಸಹಿಸೊಕ್ಕಾಗಲ್ಲ. ಇಷ್ಟಕೆಲ್ಲ ಮೂಲ ಕಾರಣ ನಾನು ತುಂಬ ಸೂಕ್ಷ್ಮ ಮನಸಿನವಳು. ಒಂದು ವಿಚಾರ ತಲೆಗೆ ಬಂತು ಅಂದ್ರೆ ಅದನ್ನ ಬಹಳ deep ಆಗಿ ತಗೆದು ಕೊಂಡು ಕೋರಗಿ ನನ್ನ ಮನಸ್ಸು ಹಿಂಡಿ ಹಿಪ್ಪೆಯಾಗಿ ಬಿಡುತ್ತೆ. ಈಗ ನಾನು jobless ಆಗಿದ್ದೀನಿ. ಮಾಧ್ಯಮ ಕ್ಷೇತ್ರದಲ್ಲಿ ತುಂಬ ಹೆಸರು ಹಾಗು ದುಡ್ಡು ಮಾಡಬೇಕು ಅನ್ನೊದು ನನ್ನ ಕನಸಾಗಿತ್ತು. ನಾನು ಈಗ ದೂರದರ್ಶನದಲ್ಲಿ ಕೆಲಸ ಮಾಡ್ತಾ ಇದ್ರು ಅಲ್ಲಿ ಒಂಥರ stagnant ಜೀವನ. ಸರಿಯಾಗಿ ಡೇಟ್ಸ್ ಕೊಡಲ್ಲ, ಸರಿಯಾಗಿ ಪೇಮೆಂಟ್ ಕೂಡ ಕೊಡಲ್ಲ. ಮತ್ತು ನಾನು ಅಲ್ಲಿ ಎದುರಿಸಿದ ಆನೇಕ ಸಮಸ್ಯೆಗಳು.ನಾನು ಚೆನ್ನಾಗಿ ಕೆಲಸ ಮಾಡ್ತಾ ಇದ್ರೆ ಅದಕ್ಕ ಕಲ್ಲು ಹಾಕ್ಕೊರು ತುಂಬ ಜನ ನನ್ನ ಸುತ್ತ ಇದ್ದಾರೆ.ಸದಾ financial independence ಗಾಗಿ ಮನೆಯವರ ಜೋತೆ ಹೋರಾಟ ನಡೆಸಿದವಳು ನಾನು.ದೂರದರ್ಶನದಲ್ಲಿ ಕೆಲಸಕ್ಕೆ ಸೇರಿದ ಮೇಲೆ ನಾನು ನನ್ನ ಖರ್ಚನ್ನ ನಾನೇ ನಿಭಾಯಿಸಿಕೊಂಡು ಹೋಗ್ತಾಯಿದ್ದೆ.petrol, ಆದು ಇದು ಅಂತ ನನ್ನ ಒಂದು ವರ್ಷದ ಸಂಪಾದನೆಯಲ್ಲಿ ನಾನು ಏನನ್ನು ಉಳಿಸೊದ್ದಿಕ್ಕೆ ಆಗಲೆ ಇಲ್ಲ. ಯಾವುದಾದರೂ ಬಡ ಮಗುವನ್ನು ಓದಿಸಬೇಕು ಅನ್ನೊ ಇರಾದೆ ನನಗೆ ತುಂಬ ಇತ್ತು. ಇದುವರೆಗೂ ಆ ಆಸೆ ನೆರವೇರಲೆ ಇಲ್ಲ.

ಇಷ್ಡು ಓದಿ ದಬಾಕಿ, ಕಡೆಗೆ ಇಲ್ಲಿಗೆ ಬಂದ್ರೆ ಇದುವರೆಗೂ ಎಲ್ಲೂ ಕೆಲಸ ಸಿಗಲಲ್ಲ.ಇದು ನನ್ನ ತುಂಬ ದೊಡ್ಡ ವರಿ. ಅಷ್ಟಕ್ಕೂ ದುಡ್ಡಿಲೆ ಬೇಕು ಆನ್ನೋ ದರ್ದು ಹಾಗೂ ಸಂಸಾರವೆ ನನ್ನ ತಲೆ ಮೇಲಿದೆ ಅಂತ ಪರಿಸ್ಥತಿ ನನಗೇನು ಇಲ್ಲ. ಆದ್ರು ಕೆಲಸದ ವಿಚಾರ ನನ್ನ ತಲೆಕೆಡಿಸಿದೆ ಅಂದ್ರೆ ನಾನು abnormalಆ ಅಂತ ನನ್ನಲ್ಲೆ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತೆ. ಇದೆಲ್ಲದರ ಬಗ್ಗೆ ನಾನು ಯೋಚನೆ ಮಾಡಿ ಹುಚ್ಚಿಯಾಗೊ ಹೊತ್ತಿಗಾಗಲೇ ನಮ್ಮಪ್ಪ ನನಗೆ ಹೋಸದೊಂದು tension ಸೃಷ್ಠಿಸಿದರು. ಆದೇ ಮದುವೆ.ನನಗೆ ಮದುವೆ ಅನ್ನೋದು ಒಂದು ಮಧುರ ಬಯಂಕರ ಪದ.ಎಲ್ಲಾದ್ದಕ್ಕಿಂತ ಮುಖ್ಯವಾಗಿ ಒಂದು ಓಳ್ಳೆ ನೌಕರಿ ಸೇರಬೇಕು, ಅಮ್ಮಂಗೆ ಸೀರೆ ಕೊಡಿಸಬೇಕು, ಅಪ್ಪಂಗೆ ಸಫಾರಿ ಹೊಲಿಸಬೇಕು ಹೀಗೆ ಇನ್ನೂ ಅನೇಕ ಚಿಕ್ಕ ಚಿಕ್ಕ ಆಸೆಗಳು.ಆದರೆ ಇವೆಲ್ಲ ಕೈಗೂಡೊ ಮೊದಲೆ ನಾನು ಮದುವೆಯ ಬಂಧನಕ್ಕೆ ಬಿದ್ದೆ ಅಂದ್ರೆ, ಎಲ್ಲಿ ನನ್ನ ಸ್ವತಂತ್ರ ಕಳೆದು ಕೊಂಡು ಬಿಡ್ತಿನೊ ಅನ್ನೊ ಭಯ ನನಗೆ.ಮಧ್ಯದಲ್ಲಿ ಮದುವೆಯಾಗುವಂತೆ ಅಪ್ಪನ ಹಿಂಸೆ. ಅವರಿಗೆ ಅವರ responsibilty ಚಿಂತೆ. ಇಲ್ಲಿ ವಿರ್ಪಯಾಸ ಅಂದ್ರೆ ನನ್ನ ಭಾವನೆಗಳಿಗೆ ಬೆಲೆಯೆ ಇಲ್ಲದಂತಾಗಿರುವುದು. ಅಪ್ಪನ ಒತ್ತಾಯಕ್ಕೆ ಮಣಿದು ನಾನು ಮದುವೆಗೆ ಒಪ್ಪಿಗೆ ಕೊಟ್ಟಿದ್ದಾಗಿದೆ.ಮುಂದೆ ದೇವರ ಇಚ್ಚೆ.

ಈ ಜ್ಯೋತಿಷ್ಯ, ಶಾಸ್ತ್ರ ಇವೆಲ್ಲ ನಾನು ಮುಂಚೆ ನಂಬ್ತಾ ಇರಲಿಲ್ಲ. ತೀರ ಈಚಿನ ದಿನಗಳಲ್ಲಿ ನಾನು ಇವುಗಳ ಬಗ್ಗೆ ತಲೆಕೆಡಿಸಿಕೊಳೊಕೆ ಶುರು ಮಾಡಿದೆ. ನನ್ನ ಜಾತಕವನ್ನ ಹಿಡಿದು ಕೊಂಡು ಆನೇಕ ಜೋಹಿಸರ ಬಳಿ ತಿರುಗಾಡಿದೆ.ಹೀಗೆ ಹೋದ ಕಡೆ ಡಿಸಂಬರ ೯ರ ನಂತರ ನನಗೆ ಓಳ್ಳೆ ಸಮಯ ಇರುವುದು ಎಂದು ಹೇಳಿದರು. ಈ ಟೈಮ್ ಗಾಗಿ ಬಕಪಕ್ಷಿಯಂತೆ ಕಾಯುತಾ ಕೂತೆ. ಈ ಮಧ್ಯೆ spiritual books ಓದುತ್ತಿದ್ದ ನನಗೆ ಒಂದು ಸತ್ಯ ಅರಿವಾಗಿ ಹೋಯಿತು. ಈ ಜಾತಕ, ಶಾಸ್ತ್ರ ಇವೆಲ್ಲ ಬರೋ ತೊಂದರೆಗಳನ್ನ ಕೊಂಚ ತಕ್ವ ಮಾಡುತ್ತವೆಯೆ ಹೋರತು ವಿಧಿ ಆಟದ ಮುಂದೆ ನಾವೆಲ್ಲ ಶೂನ್ಯ. ಒಂದು ಕಲ್ಲು ನಮ್ಮ ತಲೆಯ ಮೇಲೆ ಬೀಳುತ್ತದೆ ಅಂದ್ರೆ ನಾವು ಶಾಸ್ತ್ರ ಕೇಳುವ ಮೂಲಕ ಆ ಬೀಳುವ ಕಲ್ಲನ್ನು ನಮ್ಮ ಕಾಲಿನ ಮೇಲೆ ಬೀಳಿಸಿ ಕೊಳ್ಳ ಬಹುದು. ಆದೆ ಕಲ್ಲು ನಮ್ಮ ತಲೆಯ ಮೇಲೆ ಬಿದ್ದಿದ್ದರೆ ನಮ್ಮ ಪ್ರಾಣವೆ ಹಾರಿಹೋಗುತ್ತಿತ್ತು ನಾವು ಹೆಚ್ಚೆತ್ತು ಕೊಂಡು ಕಾಲಿನ ಮೇಲೆ ಕಲ್ಲು ಬಿದ್ದಿದ್ರಿಂದ ನಾವು ಕುಂಡುತ್ತಾ ಜೀವನ ಸಾಗಿಸಬಹುದು.ಕಲ್ಲು ಬೀಳುವುದು ನಿಷ್ಚಿತ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.ಇದ್ದಕ್ಕೆಲ್ಲ ಒಂದೇ ಮಾರ್ಗ ಆ ಭಗವಂತನ ಮೊರೆ ಹೋಗುವುದು.ಜ್ಯೋತಿಷ್ಯವೆ ಸತ್ಯ ಅನ್ನೋ ಭ್ರಮೆಗೆ ಬಿದ್ರೆ ಹೋಗದ ಊರಿಗೆ ಟ್ರೈನ್ ಹತ್ತಿ ಕುಳಿತ ಹಾಗೆ.

No comments:

Post a Comment