Wednesday, October 29, 2008

ಭಾವನಾ ಲೋಕದಲ್ಲಿ

# ಕನ್ನಡಿಯಲ್ಲಿ ನನ್ನ ಪ್ರತಿಬಿಂಬವ ನೋಡಿ ಸಾಕಾಗಿ
ನಾ ಹೊರಟೆ ಕೊಳದ ನೀರಿನಲ್ಲಿ ನನ್ನ ಮುಖವನ್ನು ನೋಡಲೆಂದು
ಪ್ರಶಾಂತವಾಗಿದ್ದ ಕೊಳದಲ್ಲಿ ನನ್ನ ಮುಖ ಕಂಡು ಬೀಗುತ್ತಿರುವಾಗ
ಯಾರೊ ಹೊಡೆದರು ಕಲ್ಲು
ನೀರಿನಲ್ಲಿ ನನ್ನ ಪ್ರತಿಬಿಂಬ ಕದಡಿ ಹೋಯಿತು
ಆಗ ನನಗೆ ನನ್ನ ಮನೆಯ ಕನ್ನಡಿಯೆ ಲೇಸೆನಿಸಿತು.

# ನಾನು ತಪ್ಪು ಮಾಡಿದೆ, ಆದಕ್ಕೆ ಕಾರಣವ ಕೊಟ್ಟೆ
I just went with the flow
ಸ್ವಲ್ಪ ದಿನದಲ್ಲೆ ಆರಿವಾಯಿತು
Only dead fish goes with the flow
ಪ್ರಶ್ನಯೊಂದು ಹುಟ್ಟಿತು
ನಾನು ಸತ್ತ ಮನಸ್ಸಿನ ಜೋತೆ ಜೀವನ ಸಾಗಿಸಿದೆ ಎಂದು ಬೇಸರವಾಯಿತು.

# ಚೆಂದದ ಹೂವ ಕಂಡೆ, ಉಂಟಾಯಿತು ಬೇಸರ
ಅ ಹೂವನ್ನು ನಿನಗೆ ಎಂದಾಗೂ ನಾ ಕೊಡಲಾರೆ ಎಂದು
ಬರೆಯಲಾರೆ ನಾ ನಿನಗೆ ಎಂದೂ ಪತ್ರ
ಹತ್ತಿರವಿದ್ದರು ದೂರವಿದಷ್ಟೆ ಅಂತರ
ನನ್ನಲ್ಲಿ ಉಂಟಾಗಿದೆ ಸಂತಸದ ಬರ.

# ನಾನು ಹೇಳಲಾಗದ ಮಾತೊಂದು
ಉಳಿದ ಹೋಗಿದೆ ನನ್ನಲ್ಲಿ
ಆ ನನ್ನ ದನಿಯನ್ನು ಮರೆಯಲಾರೆನು ಬದುಕಲ್ಲಿ
ಮರೆಯಲಾರೆನು ಕನಸ್ಸಿನ ಸಹಕಾರ
ಒಮೊಮ್ಮೆ ನೆನೆದರೆ ಮನಸ್ಸು ಅನುಭವಿಸುವುದು ನೋವಿನಾಗರ.

No comments:

Post a Comment