ನೆನಪುಗಳ ಆಂಗಳದಿ
ನಿನ್ನಾ ನೆನಪೆ ತುಂಬಿ ಕೊಂಡ ಬೆಳದಿಂಗಳು
ಭಾವನೆಗಳು ಸಾವಿರಾರು,
ನಿನ್ನ ನೆನಪೆ ಹಗಲು-ಇರುಳು
ಪ್ರೀತಿಸಲು ಅಂಜಿಕೆ ಬೇಡ. ನನ್ನ ಪ್ರೀತಿಸು.
ನದಿಯು ಕಡಲ ಸೇರೊ ಹಾಗೆ,
ನಾನು ನಿನ್ನ ಸೇರುವ ಆಸೆ
ಆಸೆಗಳಿಗೆ ಮಿತಿಯೆ ಇಲ್ಲ. ನನ್ನ ಪ್ರೀತಿಸು
ಚೆಲುವು, ಸೊಗಸು, ನೀ ತುಂಬಿಕೊಂಡಿಹೆ.
ನನ್ನ ಮನದ ತುಂಬೆಲ್ಲ ನೀನಿಹೆ.
ನೀನು ಇರೆ ಬಾಳು ಸೊಗಸು,
ಕೈಯ ಹಿಡಿದು ಮುಂದೆ ನಡೆಸು.
ಈಗೆ ಸಾಗಿದೆ ನನ್ನ ಕನಸು, ನನ್ನ ಪ್ರೀತಿಸು.
ಕೈಗೆ ಎಟುಕದ ತಾರೆ ನೀನು,
ನಿನ್ನ ಬಯಸಿ ಬಂದೆ ನಾನು,
ಸ್ವೀಕರಿಸು ಒಮ್ಮೆ ನನ್ನನು. ಬಾಬಾರೊ ಪ್ರೀತಿಸು
ಮನಸು ಮಧುರ ಬಳಿಯಲ್ಲೇ ನೀನಿರಲು
ಸುಖವ ಕಾಣುವೆ ಆದರಲ್ಲೆ ನಾನಿಂದು.
ನೆನಪುಗಳ ಆಂಗಳದಿ
ನಿನ್ನಾ ನೆನಪೆ ತುಂಬಿ ಕೊಂಡ ಬೆಳದಿಂಗಳು
ಪ್ರೀತಿಯ ತೀವ್ರತೆ ಅತ್ಯಂತವಾಗಿದೆ ನಿಮ್ಮ ಈ ಕವನದಲ್ಲಿ.
ReplyDeleteನೆನಪುಗಳ ಬೆಳದಿಂಗಳಲ್ಲಿ ತಾರೆಗಳು ಕೈಗೆ ಸಿಗಲಿ
ಹಿಡಿದುಕೊಂಡು ತುಂಬು ನಿನ್ನೆದೆಯ ಗೂಡನು.
ಕನ್ನಡದಲ್ಲಿ ಚೆನ್ನಾಗಿ ಬರೆಯುತ್ತೀರಿ.
ಮುಂದುವರಿಸಿ
ಕಾಯುತ್ತಿದ್ದೇವೆ.
ಒಲವಿನಿಂದ
ಬಾನಾಡಿ