ಹೊಸ ಹೊಸ ಭಾವನೆಗಳನ್ನು ಬರೆದನು
ಅವನು....
ನನ್ನ ಈ ಬಾಳಗೀತೆಯಲಿ
ಸ್ವರಕ್ಕೆ ಸ್ವರವನ್ನು ಬೆರೆಸಲು ಮರೆತನು
ಅವನು....
ಅಪಸ್ವರವಾಯಿತು ರಾಗದಲಿ
ಕಣ್ಣ ಹನಿಯೊಂದು ನೂರು ಕಥೆಯ ಹೇಳಿತು
ಈ ವಿರಹ ಜೋತೆಗೆ ಇರಲು
ನಗಲಾರೆ ನಾನು ಇಂದು
ನೀ ದೂರ ಹೋದ ದಿನವೇ
ಸಿಡಿಲು ಅಪ್ಪಳಿಸಿತು ನನಗೆ
ಹೇಳದೇನೆ ಬಂಧಿಸಿದೆ ನೀನು
ಸಣ್ಣ ಸೂಚನೆಯು ನೀಡದೆ ನೆಡೆದೆ ನೀನು
ಪುಟ್ಟ ಹೃದಯವಿದು ತುಂಬ ನಡುಗುವುದು
ಓಮ್ಮೆ ನೋಡು
ನಿನ್ನ ಪ್ರೀತಿಯ ಮನ ಮರೆಯುವುದೇ??
ಎಂದಾದರೂ ಬಂದು ನೋಡು.
hi shraavya,,tumba chennagide,,,,keepwriting
ReplyDelete