ಮರೆಯಲಾಗದ ನಲಿವು ಕೊಟ್ಟವನೇ
ನಿನ್ನ ನೆನೆವೆ ನಾನು ಸದಾ
ನಲಿವಿಗೂ ಮಿಗಿಲು ನೋವು ಕೊಟ್ಟವನೇ
ನಿನಗೆ ನನ್ನ ಧನ್ಯವಾದ
ಹೃದಯದ ಆಳದಲಿ ಬೇರೂರಿ
ನಂತರ ಆದೇ ಹೃದಯವನು ಚೂರು ಮಾಡಿದೆ ನೀನು
ಇದು ಸರಿಯೆ ಇನಿಯ
ಆದರೂ ನಿನಗೆ ನಾನು ಹೇಳುವೆ ಧನ್ಯವಾದ
ಸುರಿವ ಸೋನೆಯಂತೆ ನಿನ್ನ ಪ್ರೀತಿ
ಅದರಲಿ ನನ್ನನ್ನು ತೋಯಿಸಿ
ಬೇಸಿಗೆ ಬಂದಾಗ ನನ್ನ ಹೃದಯವ
ಬಿಸಿಲಿನ ಭೇಗೆಯಂತೆ ಬೇಯಿಸಿದೆ ಏಕೆ?
ಆದರೂ ನಿನಗೆ ನಾನು ಹೇಳುವೆ ಧನ್ಯವಾದ
No comments:
Post a Comment