ನಿನ್ನ ಕಂಡ ದಿನ
ನಲಿಯಿತು ನನ್ನ ಮನ
ಏತಕೋ ನಾ ಆರಿಯೆ
ನಿನ್ನ ನುಡಿ ಕೇಳಿದ ದಿನ
ಮುದುಡಿತು ನನ್ನ ಮನ
ನೊಂದ ಮನಸ್ಸಿನ ಬೇಗುದಿಯೋ...
ನಿನ್ನ ಕಾಣದ ದಿನ
ದುಗುಡದಿ ನೊಂದ ಮನ
ಚಿಂತೆಯಲಿ ಬಸವಳಿದಿದೆಯೋ....
ನಿರೀಕ್ಷೆಯಂತೆ ನೀ ಬಂದ ದಿನ
ಆನಂದದಿ ಕುಣಿದಾಡಿತು ಮನ
ಕನಸು ನನಸಾಗುವುದೆಂಬ ಭ್ರಮೆಯೋ...
ಕಂಡ ಕನಸು ಚೂರಾದ ದಿನ
ಕಲ್ಲಾಯಿತು ನನ್ನ ಮನ
ಕನಸು ಕಟ್ಟಬಾರದೆಂದು ತೀರ್ಮಾನಿಸಿಯೇ.....
ನಾ, ಬಂದು ನಿನ್ನ ಕಂಡ ದಿನ
ನನ್ನ ಪ್ರೀತಿ ಬೇಡಿ ನಿಂತಿದ್ದ ನಿನ್ನನ್ನು ಕಂಡು
ನಲಿದಾಡಿತು ನನ್ನ ತನು ಮನ
ಅನುರಾಗ ಮೂಡಿದ ಮೇಲೆ
ಸಾವಿರಾರು ಆಸೆಯ ಮಾಲೆ
ಹೃದಯವು ಬಯಸಿತು ನಿನ್ನನ್ನು
ಮರುದಿನವೇ ಸಂಗಾತಿಗಳಾದೆವು.....
ತಕ್ಷಣವೇ ಅಮ್ಮ ಚೀರಿದಳು
ಸೂರ್ಯ ಮೂಡಿಯಾಯಿತು
ರಂಗೊಲಿ ಹಾಕಿ, ಅಡುಗೆ ಸಿದ್ದ ಮಾಡೆಂದು!!!!!
No comments:
Post a Comment