Sunday, July 12, 2009

ಶರಣಾಗತಿ

ತಪ್ಪು ಮಾಡಿದರೆ
ಮೋಸ ಮಾಡಿದರೆ
ಶರಣಾಗು ನೀನು ಸಾಧ್ಯವಾದರೆ
ಬಿರುಗಾಳಿಯಲ್ಲಿ ನೀನು ಸಿಲುಕಿ ನರಳುವೆ
ಮನಸ್ಸಲ್ಲಿ ನೂರು ಚಿಂತೆ ಬಿಡದೆ ಕಾಡಿದೆ

ಕಣ್ಣಗಳಲ್ಲಿ ಪ್ರೀತಿಯ ತೋರು
ಹೃದಯದಲಿ ಸತ್ಯದ ತೇರು
ನಿನ್ನಲ್ಲಿ ಇರಲಿ ಇದು ಸಾಧ್ಯವಾದರೆ
ಮೈಯಲ್ಲಾ ವಿಷವನು ಕಾರಿ
ಮನಸ್ಸಲ್ಲಿ ಹೊಂಚು ಹಾಕಿ
ದ್ರೋಹ ಮಾಡಬೇಡ ನೀನು ಸಾಧ್ಯವಾದರೆ

ಭಗವಂತ ನೋಡುತಿಹನು
ನೀ ಮಾಡೊ ಎಲ್ಲಾ ಕೆಲಸವನು
ಮೋಗಚಿ ಹಾಕುವನು ನಿನ್ನನು
ನಡೆ ಮುಂದೆ ಎಂದಿದೆ ಬದುಕು
ಜೋತೆಯಲ್ಲಿದೆ ದೇವರ ಬೆಳಕು
ಎಡವದಿರು ನೀನು ಸಾಧ್ಯವಾದರೆ.

2 comments:

  1. ಭಾವನೆಗಳ ತೊಳಲಾಟ ಚೆನ್ನಾಗಿ ಬಿಂಬಿಸಿದ್ದೀರಿ...

    ಅಭಿನಂದನೆಗಳು...

    ReplyDelete
  2. good channagide. try madi innu adbuthavagi barithiri.

    ReplyDelete