Thursday, March 11, 2010

ದೂರ ಹೋಗು

ಹೋಗುವೆಯಂತೆ ಆತುರ ಏತಕೆ
ನಾನು ಮಾತಾಡ ಬೇಕಿದೆ ಕೊಂಚ
ಈ ಕ್ಷಣ ಜಾರಿದರೆ ಇನ್ನೂ ಬರಿ ಮೌನ
ಸಮಯವು ಹಾಕಿದೆ ಸೀಮಾ

ನನ್ನ ಹೃದಯದಲಿ ನೆಡೆದಿದೆ
ಮತ್ತೊಬ್ಬನಿಗೆ ಪಟ್ಟಾಭಿಷೇಕ
ನನ್ನ ಪ್ರೀತಿಯ ಕರೆ ಕೇಳಿದರೂ
ನೀನೂ ಹಿಂದಿರುಗಿ ಬರಲಿಲ್ಲ
ಅದಕ್ಕೆ ನಾನು ನೀಡಿರುವೆ ನಿನಗೆ ಶಾಸ್ತಿ

ಹೇಳ ಬಯಸಿದೆ ನೂರು ಮಾತು
ಮಾತಾಡಲಾಗದೆ ಮುಚ್ಚಿಕೊಂಡೆ
ನಿನ್ನ ಮುಂದೆ ನಿಂತಾಗ
ನನ್ನ ಹಣೆಯಲಿ ಮೂಡಿದೆ
ಬೆವರ ಹನಿಗಳ ತೋರಣ
ಇದರಿಂದ ಮುಖದಲ್ಲಿ ಹತಾಶೆ

ಮಾಡಿಸ ಬೇಕು ಎಂದಿದ್ದೆ
ಚಂದ್ರನ ಮುರಿಸಿ ಖಡ್ಗ
ಬೆಟ್ಟದ ಸಾಲುಗಳ ನೆಲಹಾಸು ಮಾಡಿ
ಎಲ್ಲಾ ತರದ ಹೂಗಳ ಪೇರಿಸಿ ನಿನಗೆ ಹಾರವ ಮಾಡಿಸಿ
ತೋಡಿಸ ಬೇಕೆಂದ್ದಿದೆ ನಕ್ಷತ್ರದ ಒಂದು ತುಂಡಿನ ಕಿರೀಟ

ಇದಕ್ಕೆಲ್ಲಾ ಆರ್ಹನಲ್ಲ ನೀನು ನನ್ನ ನಲ್ಲ
ಆದರಿಂದ ನನ್ನ ಹೃದಯದಲ್ಲಿ ನಡೆಯುತ್ತಿದೆ
ಮತ್ತೊಬ್ಬನೊಂದಿಗೆ ಪಟ್ಟಾಭಿಷೇಕ
ನನ್ನ ಹೃದಯದಿಂದ ನೆಡೆದು ಹೋದ ನಿನಗೆ
ನಾ ಹೇಳುತ್ತಿರುವೆ ದೂರ ಹೋಗು

No comments:

Post a Comment